ನಂಜನಗೂಡು ಬಳಿ ಶಾಲಾ ವಾಹನ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

First Published 25, Jun 2018, 11:05 AM IST
Private School vehicle accident near Nanjanagudu
Highlights

ನಂಜನಗೂಡಿನ ಹೆಡತಲೆ ಕುರಟ್ಟಿ ಮಾರ್ಗವಾಗಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಖಾಸಗಿ ವಾಹನ ಪಲ್ಟಿಯಾಗಿ  ವಾಹನ  ಚಾಲಕ ಕಾಂತರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಹೆಮ್ಮರಗಾಲ ಗ್ರಾಮದ ಗುರುಕುಲ ಖಾಸಗಿ ಶಾಲೆಯಲ್ಲಿ ಮಕ್ಕಳು ಕಲಿಯುತ್ತಿದ್ದರು.  ಕುರಹಟ್ಟಿ ಗ್ರಾಮದಿಂದ ಮಕ್ಕಳನ್ನು ಹತ್ತಿಸಿಕೊಂಡು ಹೆಡತಲೆ ಮಾರ್ಗವಾಗಿ ಹೆಮ್ಮರಗಾಲ  ಖಾಸಗಿ ಶಾಲೆಗೆ  ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. 
 

ಮೈಸೂರು (ಜೂ. 25): ನಂಜನಗೂಡಿನ ಹೆಡತಲೆ ಕುರಟ್ಟಿ ಮಾರ್ಗವಾಗಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಖಾಸಗಿ ವಾಹನ ಪಲ್ಟಿಯಾಗಿ  ವಾಹನ  ಚಾಲಕ ಕಾಂತರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಹೆಮ್ಮರಗಾಲ ಗ್ರಾಮದ ಗುರುಕುಲ ಖಾಸಗಿ ಶಾಲೆಯಲ್ಲಿ ಮಕ್ಕಳು ಕಲಿಯುತ್ತಿದ್ದರು.  ಕುರಹಟ್ಟಿ ಗ್ರಾಮದಿಂದ ಮಕ್ಕಳನ್ನು ಹತ್ತಿಸಿಕೊಂಡು ಹೆಡತಲೆ ಮಾರ್ಗವಾಗಿ ಹೆಮ್ಮರಗಾಲ  ಖಾಸಗಿ ಶಾಲೆಗೆ  ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಖಾಸಗಿ ವಾಹನದಲ್ಲಿದ್ದ 20 ಮಕ್ಕಳಲ್ಲಿ ಸುಮಾರು 12 ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡಿರುವ  ಮಕ್ಕಳನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ವರ್ಷವೂ ಇದೇ ತಿಂಗಳಿನಲ್ಲಿ ನಂಜನಗೂಡು ತಾಲೂಕಿನ ಮುದ್ದಹಳ್ಳಿ ಗ್ರಾಮದ ಬಳಿ ಖಾಸಗಿ ಶಾಲಾ ವಾಹನ ಅಪಘಾತಕ್ಕೀಡಾಗಿತ್ತು . ಹಲವಾರು ಮಕ್ಕಳು ಗಂಭೀರ ಗಾಯಗೊಂಡಿದ್ದರು.   ಸ್ಥಳಕ್ಕೆ ನಂಜನಗೂಡಿನ ಬಿಇಓ ನಾರಾಯಣ, ಮಹೇಶ್  ಅಪಘಾತ ನಡೆದ ಸ್ಥಳಕ್ಕೆ ದೌಡಾಯಿಸಿದ್ದಾರೆ. 
 

loader