ಹೆಣ್ಣುಮಗುವಿನ ತಂದೆಯಾಗಲಿರುವುದಾಗಿ ಭರವಸೆ ಹೊಂದಿದ್ದಾಗಿ ಮಹರಾಜ ಹೇಳಿಕೊಂಡಿದ್ದಾರೆ. ಅಲ್ಲದೇ ಮಗುವಿನ ಆಗಮನದ ನಿರೀಕ್ಷೆಯಲ್ಲಿ ತಾವು ಅತ್ಯಂತ ಸಂತೋಷದಿಂದ ಇರುವುದಾಗಿ ಹೇಳಿದ್ದಾರೆ.

ಲಂಡನ್ :  ಬ್ರಿಟನ್ ರಾಯಲ್ ಫ್ಯಾಮಿಲಿಯ ಪ್ರಿನ್ಸ್ ಹ್ಯಾರಿ ಇದೀಗ ತಂದೆಯಾಗುವ ಕಾತುರದಲ್ಲಿದ್ದಾರೆ. ಇನ್ನೇನು ಕೆಲವೇ ತಿಂಗಳಲ್ಲಿ ರಾಜಮನೆತನಕ್ಕೆ ಮಗುವೊಂದು ಆಗಮಿಸಲಿದ್ದು, ತಾವು ಹೆಣ್ಣು ಮಗುವಿನ ತಂದೆಯಾಗುವ ಭರವಸೆ ಹೊಂದಿದ್ದಾರೆ. 

34 ವರ್ಷದ ಮೇಘನ್ ಮರ್ಕೆಲ್ ಗರ್ಭಿಯಾಗಿರುವ ಈ ಸಂದರ್ಭದಲ್ಲಿ ತಮ್ಮ ಎಎಕ್ಸೈಟ್ ಮೆಂಟ್ ಹಂಚಿಕೊಂಡಿದ್ದಾರೆ. 

ಪತ್ನಿ ಗರ್ಭಿಣಿಯಾಗಿರುವ ಈ ಸಂದರ್ಭ ತಮಗೆ ಅತ್ಯಂತ ಸಂತೋಷದ ಕ್ಷಣಗಳಾಗಿವೆ ಎಂದು ಹೇಳಿಕೊಂಡಿದ್ದಾರೆ. 

ಕಳೆದ ಮೇ ತಿಂಗಳಲ್ಲಿ ಈ ರಾಯಲ್ ಜೋಡಿ ವಿವಾಹ ನಡೆದಿದ್ದು ಕಳೆದ ವಾರವಷ್ಟೇ ಮೇಘನ್ ಗರ್ಭಿಣಿಯಾಗಿರುವ ವಿಚಾರವನ್ನು ಬಹಿರಂಗ ಮಾಡಿದ್ದರು.