ಮೊದಲ ಮಗುವಿನ ನಿರೀಕ್ಷೆಯಲ್ಲಿ ಮೇಘನ್ ದಂಪತಿ ಇದ್ದು, ಇದೀಗ ಮೊದಲ ಬೇಬಿ ಗಿಫ್ಟ್ ಸ್ವೀಕಾರ ಮಾಡಿದ್ದಾರೆ. 

ಲಂಡನ್: ಬ್ರಿಟಿಷ್ ರಾಜಮನೆತನದ ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಮಾರ್ಕೆಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವರ್ಷದ ಮೇ ತಿಂಗಳಲ್ಲಿ ವಿಂಡ್ಸರ್ ಕ್ಯಾಸ್ಟಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮೇಘನ್ ಗರ್ಭವತಿಯಾಗಿದ್ದು, ಮುಂದಿನ ವರ್ಷದ ಮೊದಲಾರ್ಧದಲ್ಲಿ ಮಗುವಿಗೆ ಜನ್ಮ ನೀಡುವ ಸಾಧ್ಯತೆಯಿದೆ. 

ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನೇ ಹೊರಡಿಸಿರುವ ಕೆನ್ಸಿಂಗ್ಟನ್ ಅರಮನೆ, ‘ಹ್ಯಾರಿ- ಮೇಘನ್ ದಂಪತಿಗೆ ಭಾರೀ ಬೆಂಬಲ ನೀಡಿರುವ ನಿಮ್ಮೆಲ್ಲರಿಗೂ ಮೇಘನ್ ಅವರು, ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಖುಷಿ ವಿಚಾರ ತಿಳಿ ಸಲು ಇಚ್ಚಿಸುತ್ತೇವೆ,’ ಎಂದು ತಿಳಿಸಲಾಗಿದೆ.