ಈಗಾಗಲೇ ಅತ್ಯಧಿಕ ಬಿಗಿಭದ್ರತೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಸುತ್ತ 2.8. ಕಿ.ಮೀ. ಉದ್ದದ ‘ಸೆನ್ಸರ್ ಬೇಲಿ’ ಅಳವಡಿಕೆ ಮಾಡಲು ಪ್ರಧಾನಮಂತ್ರಿಗಳ ಭದ್ರತಾ ಹೊಣೆ ಹೊತ್ತುಕೊಂಡಿರುವ ವಿಶೇಷ ರಕ್ಷಣಾ ಗುಂಪು (ಎಸ್ ಪಿಜಿ) ನಿರ್ಧರಿಸಿದೆ.

ನವದೆಹಲಿ: ಈಗಾಗಲೇ ಅತ್ಯಧಿಕ ಬಿಗಿಭದ್ರತೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಸುತ್ತ 2.8. ಕಿ.ಮೀ. ಉದ್ದದ ‘ಸೆನ್ಸರ್ ಬೇಲಿ’ ಅಳವಡಿಕೆ ಮಾಡಲು ಪ್ರಧಾನಮಂತ್ರಿಗಳ ಭದ್ರತಾ ಹೊಣೆ ಹೊತ್ತುಕೊಂಡಿರುವ ವಿಶೇಷ ರಕ್ಷಣಾ ಗುಂಪು (ಎಸ್ ಪಿಜಿ) ನಿರ್ಧರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಧಾನಿ ನಿವಾಸದೊಳಕ್ಕೆ ಅಕ್ರಮವಾಗಿ ಯಾರೇ ನುಸುಳಲು ಯತ್ನಿಸಿದರೂ ತಕ್ಷಣವೇ ಅಲಾರಾಂ ಮೊಳಗಿಸುವ ‘ಪೆರಿಮೀಟರ್ ಇನ್‌ಟ್ರೂಷನ್ ಡಿಟೆಕ್ಷನ್ ಸಿಸ್ಟಂ’ (ಪಿಡ್ಸ್) ಎಂಬ ವ್ಯವಸ್ಥೆ ಇದಾಗಿದ್ದು, ಬಿಡಿಭಾಗಗಳೂ ಸೇರಿದಂತೆ ಎಲ್ಲ ಉಪಕರಣ ಸ್ವದೇಶದಲ್ಲೇ ನಿರ್ಮಾಣವಾಗಿರ ಬೇಕು ಎಂಬ ಷರತ್ತನ್ನು ಟೆಂಡರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಧಾನಿ ಮೋದಿ ಅವರು ಲೋಕಕಲ್ಯಾಣ ಮಾರ್ಗದಲ್ಲಿನ ನಂ.7ನೇ ಸಂಖ್ಯೆಯ ನಿವಾಸದಲ್ಲಿ ವಾಸಿಸುತ್ತಾರೆ. ಟೆಂಡರ್ ಸಿಕ್ಕ ಮೂರು ತಿಂಗಳಲ್ಲಿ ಈ ವ್ಯವಸ್ಥೆ ಅಳವಡಿಕೆ ಮಾಡಿಕೊಡಬೇಕು. ಜತೆಗೆ 10 ಎಸ್‌ಪಿಜಿ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಸಮಸ್ಯೆಯಾದರೆ ಇಪ್ಪತ್ನಾಲ್ಕೂ ನಿರ್ವಹಣೆಗೆ ಸಿದ್ಧವಿರಬೇಕು ಎಂಬ ಷರತ್ತುಗಳನ್ನು ನೀಡಲಾಗಿದೆ.