ಗುರು ಪೂರ್ಣಿಮೆ ಹಿನ್ನೆಲೆ| ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಭೇಟಿ ಮಾಡಿದ ಪ್ರಧಾನಿ| ‘ಶ್ರೀಗಳೊಂದಿಗೆ ಸಮಯ ಕಳೆಯುವ ಸುವರ್ಣಾವಕಾಶ ಲಭಿಸಿದೆ’| ‘ಶ್ರೀಗಳ ಮಾತು ಕೇಳುವುದು ಒಂದು ಅದ್ಭುತ ಅನುಭವ’| ಗುರುಗಳಿಂದ ಕಲಿಯವುದು ಬಹಳಷ್ಟಿದೆ ಎಂದ ಪ್ರಧಾನಿ|
ನವದೆಹಲಿ(ಜು.16): ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾದರು.
ನವದೆಹಲಿಯಲ್ಲಿ ಶ್ರೀಗಳನ್ನು ಭೇಟಿಯಾದ ಪ್ರಧಾನಿ ಮೋದಿ, ಈ ಕುರಿತು ಟ್ವಿಟ್ಟರ್’ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
‘ಗುರುಪೂರ್ಣಿಮೆಯ ಶುಭ ಸಮಯದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಜೊತೆಗೆ ಸಮಯ ಕಳೆಯುವ ಸುವರ್ಣಾವಕಾಶ ಲಭಿಸಿದೆ..’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಶ್ರೀಗಳ ಆಲೋಚನೆ, ಅವರ ಮಾತುಗಳನ್ನು ಕೇಳುವುದು ಒಂದು ಅದ್ಭುತ ಅನುಭವ ಎಂದಿರುವ ಪ್ರಧಾನಿ, ಗುರುಗಳಿಂದ ಕಲಿಯವುದು ಬಹಳಷ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
