ಈ ಸಂದರ್ಭದಲ್ಲಿ ಯೋಗದ ಬಗ್ಗೆ ಪ್ರಸ್ತಾಪಿಸಿದ ಮೋದಿ, ಜೂನ್ 21 ರಂದು ಇಡೀ ವಿಶ್ವವೇ ಯೋಗಮಯವಾಗಿತ್ತು. ಚೀನಾ ಹಾಗೂ ಪೆರುವಿನಲ್ಲೂ ಜನ ಯೋಗ ಮಾಡಿದ್ದಾರೆ. ವಿಶ್ವದೆಲ್ಲೆಡೆ ಯೋಗ ದಿನವನ್ನ ಅರ್ಥಪೂರ್ಣವಾಗಿ  ಆಚರಿಸಲಾಗಿದೆ. ನಾನೂ ಸಹ ಮಳೆಯಲ್ಲಿಯೇ ಕುಳಿತು ಯೋಗ ಮಾಡಿದೆ ಎಂದು ಮೋದಿ ಸ್ಮರಿಸಿದರು.

ನವದೆಹಲಿ(ಜೂ.25): ಆಕಾಶವಾಣಿ ರೇಡಿಯೋದ ಮಹತ್ವದ ಕಾರ್ಯಕ್ರಮ 33 ನೇ ಮನ್ ಕಿ ಬಾತ್​ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಮುಸ್ಲಿಂ ಭಾಂದವರಿಗೆ ರಂಜಾನ್ ಶುಭಾಶಯ ಕೋರಿದ್ದಾರೆ.

ಈ ಸಂದರ್ಭದಲ್ಲಿ ಯೋಗದ ಬಗ್ಗೆ ಪ್ರಸ್ತಾಪಿಸಿದ ಮೋದಿ, ಜೂನ್ 21 ರಂದು ಇಡೀ ವಿಶ್ವವೇ ಯೋಗಮಯವಾಗಿತ್ತು. ಚೀನಾ ಹಾಗೂ ಪೆರುವಿನಲ್ಲೂ ಜನ ಯೋಗ ಮಾಡಿದ್ದಾರೆ. ವಿಶ್ವದೆಲ್ಲೆಡೆ ಯೋಗ ದಿನವನ್ನ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ನಾನೂ ಸಹ ಮಳೆಯಲ್ಲಿಯೇ ಕುಳಿತು ಯೋಗ ಮಾಡಿದೆ ಎಂದು ಮೋದಿ ಸ್ಮರಿಸಿದರು.

ಇನ್ನು ಶೌಚಾಲಯದ ಅಗತ್ಯತೆ ಬಗ್ಗೆ ಮೋದಿ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. ಇದೇ ವೇಳೆ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಒಂದು ಕರಾಳ ಘಟನೆ. ಈ ವೇಳೆ ವಾಜಪೇಯಿ ಸೇರಿದಂತೆ ಅನೇಕ ಗಣ್ಯರು ಜೈಲು ಸೇರಿದ್ದರು ಎಂದು ಹೇಳಿದ್ದಾರೆ.