Asianet Suvarna News Asianet Suvarna News

ಡಬಲ್ ಗುನ್ನಾ: ಕೇಂದ್ರ, ರಾಜ್ಯ ಕೇಳುತ್ತಿಲ್ಲ ಪ್ರಾಬ್ಲಂ!

ಜನಸಾಮಾನ್ಯನ ಸ್ಥಿತಿ ಅತ್ತ ದರಿ, ಇತ್ತ ಪುಲಿ

ಬೆಲೆ ಏರಿಕೆ ಬಿಸಿಗೆ ಜನಸಾಮಾನ್ಯ ತತ್ತರ

ಕೇಂದ್ರ, ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಹೈರಾಣು

ಜನಸಾಮಾನ್ಯನ ಗೋಳು ಕೇಳುವವರು ಯಾರು?

 

ಬೆಂಗಳೂರು(ಜು.15): ಅತ್ತ ಕೇಂದ್ರ ಸರ್ಕಾರ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದೆ ಎಂಬ ಕಾರಣ ನೀಡಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡುತ್ತಿದೆ. ಇತ್ತ ರಾಜ್ಯ ಸರ್ಕಾರ ರೈತರ ಸಲಾಮನ್ನಾ ಮಾಡಲು ಹಣ ಬೇಕಾಗಿದ್ದು, ಇದಕ್ಕಾಗಿ ಪೆಟ್ರೋಲ್ ಮೇಲೆ ಸೆಸ್ ಹಾಕಿ ತೈಲ ಬೆಲೆ ಏರಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಾವು ಏಣಿ ಆಟಕ್ಕೆ ಬಲಿಯಾಗುತ್ತಿರುವುದು ಮಾತ್ರ ಜನಸಮಾನ್ಯರು.  ಒಂದು ಕಡೆ ಭಾರತದ ಜಿಡಿಪಿ ನಿರಂತರ ಏರಿಕೆ ಕಾಣುತ್ತಲೇ ಇದೆ. ಆದರೆ ದೇಶದ ಸಂಪತ್ತು ಮಾತ್ರ ಜನಸಾಮಾನ್ಯರ ಪಾಲಿಗೆ ಕನ್ನಡಿಯೊಳಗಿನ ಗಂಟಾಗಿದೆ.

ತೈಲ ಬೆಲೆ ಏರಿಕೆ ಎಂಬುದು ಜನಸಾಮಾನ್ಯರನ್ನು ಭೂತವಾಗಿ ಕಾಡುತ್ತಿರುವುದು ಸುಳ್ಳಲ್ಲ. ಎರಡೂ ಸರ್ಕಾರಗಳು ತಮ್ಮದೇ ಕಾರಣ ನೀಡಿ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿವೆ.  ಸರ್ಕಾರಗಳು ನೀಡುತ್ತಿರುವ ಗುನ್ನಾ ಮಾತ್ರ ಜನಸಾಮಾನ್ಯರಿಗೆ ತಡೆದುಕೊಳ್ಳಲಾಗುತ್ತಿಲ್ಲ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..