ಮಧ್ಯಪ್ರದೇಶದಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಸಿ ಭಾನುವಾರ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಅಮಿತಾವ ರಾಯ್ ಅವರನ್ನೊಳಗೊಂಡ ಪೀಠ ಇಂತಹುದೊಂದು ತೀರ್ಪು ನೀಡಿದೆ.
ನವದೆಹಲಿ(ನ.20): ವರದಕ್ಷಿಣೆಗಾಗಿ ಪತ್ನಿಯ ಮೇಲೆ ಕ್ರೌರ್ಯ ಮತ್ತು ದೌರ್ಜನ್ಯ ನಡೆಸುತ್ತಿದ್ದ ಎಂಬುದರ ಬಗ್ಗೆ ಸೂಕ್ತ ಪುರಾವೆ ಒದಗಿಸಿದರಷ್ಟೇ ಮೃತಪಟ್ಟ ಮಹಿಳೆಯ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಧ್ಯಪ್ರದೇಶದಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಸಿ ಭಾನುವಾರ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಅಮಿತಾವ ರಾಯ್ ಅವರನ್ನೊಳಗೊಂಡ ಪೀಠ ಇಂತಹುದೊಂದು ತೀರ್ಪು ನೀಡಿದೆ. ‘‘ವರದಕ್ಷಿಣೆಗಾಗಿ ಪತ್ನಿ ಮೇಲೆ ಪತಿ ಹಲ್ಲೆ ಮಾಡುತ್ತಿದ್ದ ಎಂಬುದರ ಬಗ್ಗೆ ಸಮಂಜಸ ಸಾಕ್ಷ್ಯ ನೀಡಲು ಅಸಾಧ್ಯವಾದರೆ, ಪೂರ್ವಗ್ರಹ ಪೀಡಿತವಾಗಿ ಸಾವಿಗೀಡಾದ ಮಹಿಳೆಯ ಪತಿಯ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ,’’ ಎಂದು ಪೀಠ ಹೇಳಿದೆ. ಮೃತಪಟ್ಟ ಮಹಿಳೆಯ ಮೇಲೆ ವರದಕ್ಷಿಣೆಗಾಗಿ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿದ್ದವು ಎಂಬುದಕ್ಕೆ ಸಾಕ್ಷ್ಯ ಇದ್ದರಷ್ಟೇ ಪತಿಯ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಬಹುದು ಎಂದಿರುವ ಪೀಠ, 1996ರಲ್ಲಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮಹಿಳೆಯ ಪತಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಮಹಿಳೆಯು ಆತ್ಮಹತ್ಯೆ ಮಾಡಿಕೊಂಡ ನಂತರ ಆಕೆಯ ಪತಿ ಹಾಗೂ ಆತನ ಹೆತ್ತವರನ್ನು ಬಂಸಿದ್ದ ಪೊಲೀಸರು ಅವರ ವಿರುದ್ಧ ವರದಕ್ಷಿಣೆ ಆರೋಪ ಹೊರಿಸಿದ್ದರು. ಇದಾದ ಎರಡು ವರ್ಷಗಳಲ್ಲೇ ಅಂದರೆ, ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ಪತಿಯೂ ಆತ್ಮಹತ್ಯೆ ಮಾಡಿಕೊಂಡಿದ್ದ.
