ಕಳೆದ ಜನವರಿಯಲ್ಲಿ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಟ್ರಂಪ್’ರೊಂದಿಗೆ ಇದು ಪ್ರಧಾನಿ ಮೋದಿಯವರ ಪ್ರಥಮ ಭೇಟಿಯಾಗಲಿದೆ. ಆದರೆ ಅವರಿಬ್ಬರು ಈವರೆಗೆ ಟೆಲಿಫೋನ್ ಮೂಲಕ ಮೂರು ಬಾರಿ ಸಂಭಾಷಣೆ ನಡೆಸಿದ್ದಾರೆ.
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಇದೇ ತಿಂಗಳ 25-26ಕ್ಕೆ ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ.
ಕಳೆದ ಜನವರಿಯಲ್ಲಿ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಟ್ರಂಪ್’ರೊಂದಿಗೆ ಇದು ಪ್ರಧಾನಿ ಮೋದಿಯವರ ಪ್ರಥಮ ಭೇಟಿಯಾಗಲಿದೆ. ಆದರೆ ಅವರಿಬ್ಬರು ಈವರೆಗೆ ಟೆಲಿಫೋನ್ ಮೂಲಕ ಮೂರು ಬಾರಿ ಸಂಭಾಷಣೆ ನಡೆಸಿದ್ದಾರೆ.
ಭಾರತದ ಬಗ್ಗೆ ನಕಾರಾತ್ಮಕ ಹೇಳಿಕೆ ನೀಡಿ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಇತ್ತೀಚೆಗೆ ಅಮೆರಿಕಾ ಹೊರನಡೆದಿರುವ ಹಿನ್ನೆಲೆಯಲ್ಲಿ ಈ ಭೇಟಿಯು ಬಹಳ ಮಹತ್ವವನ್ನು ಪಡೆದುಕೊಂಡಿದೆ.
ಹವಾಮಾನ ಒಪ್ಪಂದ ಹೆಸರಿನಲ್ಲಿ ವಿದೇಶಿ ದೇಣಿಗೆಗಳ ಮೂಲಕ ಭಾರತ ಹಾಗೂ ಇತರ ಅಭಿವೃದ್ಧಿಶೀಲ ದೇಶಗಳು, ಅಭಿವೃದ್ಧಿ ಹೊಂದಿದ ದೇಶಗಳಿಂದ ಬಿಲಿಯನ್’ಗಟ್ಟಲೆ ಹಣವನ್ನು ವಸೂಲು ಮಾಡುತ್ತಿದ್ದಾರೆಂದು ಟ್ರಂಪ್ ಆರೋಪಿಸಿದ್ದರು.
ಇದಲ್ಲದೆ ಎಚ್-1ಬಿ ವೀಸಾ ಬಗ್ಗೆ ಅಮೆರಿಕಾ ತಳೆಯುತ್ತಿರುವ ಧೋರಣೆಯು ಭಾರತಕ್ಕೆ ಸವಾಲಾಗಿದ್ದು, ಆ ಬಗ್ಗೆಯೂ ಮಾತುಕತೆ ನಡೆಯುವ ಸಾದ್ಯತೆಗಳಿವೆ ಎನ್ನಲಾಗಿದೆ.
ಅಮೆರಿಕಾ ನಿಕಟಪೂರ್ವ ಅಧ್ಯಕ್ಷ ಬರಾಕ್ ಒಬಾಮಾರೊಂದಿಗೆ ಪ್ರಧಾನಿ ಮೋದಿ 8 ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.