ನೋಟು ಅಮಾನ್ಯದ 50 ದಿನಗಳ ಗಡುವು ಮುಗಿದ ಬಳಿಕ ಮೊದಲ ಬಾರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇದರ ಕುರಿತು ಪ್ರತಿಕ್ರಿಯಿಸಿದ್ದಾರೆ.

ನವದೆಹಲಿ (ಜ.05): ನೋಟು ಅಮಾನ್ಯದ 50 ದಿನಗಳ ಗಡುವು ಮುಗಿದ ಬಳಿಕ ಮೊದಲ ಬಾರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇದರ ಕುರಿತು ಪ್ರತಿಕ್ರಿಯಿಸಿದ್ದಾರೆ.

ನೋಟು ಅಮಾನ್ಯವು ಕಪ್ಪುಹಣವನ್ನು ಸಂಗ್ರಹಿಸಲು ಹಾಗೂ ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತಿರುವುದರಿಂದ ತಾತ್ಕಾಲಿಕವಾಗಿ ಆರ್ಥಿಕತೆಯನ್ನು ಕುಸಿತಗೊಳಿಸುತ್ತದೆ ಎಂದಿದ್ದಾರೆ.

ನೋಟು ನಿಷೇಧ ಕ್ರಮದಿಂದ ತೊಂದರೆಗೊಳಗಾದ ಜನಸಾಮಾನ್ಯರಿಗಾಗಿ ಸರ್ಕಾರ ಇನ್ನಷ್ಟು ಹೆಚ್ಚಿಗೆ ಕಾಳಜಿ ವಹಿಸಬೇಕು ಎಂದಿದ್ದಾರೆ.