ರಾಮದಾಸ್‌ ಕ್ಷೇತ್ರದಲ್ಲಿ ಪ್ರೇಮಾಕುಮಾರಿ ಸ್ಪರ್ಧೆ!

Prema Kumaro Contest Election
Highlights

ಮಾಜಿ ಸಚಿವ ರಾಮದಾಸ್‌ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದ್ದ ಪ್ರೇಮಾಕುಮಾರಿ ಅವರು ಇಂಡಿಯನ್‌ ನ್ಯೂ ಕಾಂಗ್ರೆಸ್‌ ಪಕ್ಷದಿಂದ(ಐಎನ್‌ಸಿಪಿ) ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಬುಧವಾರ ವಿವಿಧೆಡೆ ಪ್ರಚಾರ ನಡೆಸಿದರು.

ಮೈಸೂರು: ಮಾಜಿ ಸಚಿವ ರಾಮದಾಸ್‌ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದ್ದ ಪ್ರೇಮಾಕುಮಾರಿ ಅವರು ಇಂಡಿಯನ್‌ ನ್ಯೂ ಕಾಂಗ್ರೆಸ್‌ ಪಕ್ಷದಿಂದ(ಐಎನ್‌ಸಿಪಿ) ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಬುಧವಾರ ವಿವಿಧೆಡೆ ಪ್ರಚಾರ ನಡೆಸಿದರು.

ನಗರದ ನೂರೊಂದು ಗಣಪತಿ ದೇವಸ್ಥಾನದ ಬಳಿ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರಲ್ಲಿ ಈ ಬಾರಿ ತಮಗೆ ಬೆಂಬಲ ನೀಡುವಂತೆ ಕೋರಿದರು. ಐಎನ್‌ಸಿಪಿ ಚಿಹ್ನೆಯು ನೇಗಿಲು ಹೊತ್ತ ರೈತನ ಗುರುತಾಗಿದೆ. ನಾನು ಯಾರ ವಿರುದ್ಧವೂ ಸ್ಪರ್ಧಿಸುತ್ತಿಲ್ಲ.

ರಾಜಕೀಯ ಅವಕಾಶ ಬಯಸಿ ಸ್ಪರ್ಧಿಸುತ್ತಿದ್ದೇನೆ. ಕೆ.ಆರ್‌. ಕ್ಷೇತ್ರದ ಪ್ರಜ್ಞಾವಂತ ಮತದಾರರು ಸೂಕ್ತ ತೀರ್ಮಾನ ಕೈಗೊಂಡು, ನೊಂದ ಮಹಿಳೆಗೆ ಬೆಂಬಲ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ಅವರು ತಿಳಿಸಿದರು. ರಾಮದಾಸ್‌ ಅವರು ಕೆ.ಆರ್‌. ಕ್ಷೇತ್ರದ ಮಾಜಿ ಶಾಸಕರಾಗಿದ್ದು, ಬಿಜೆಪಿ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ.

loader