ವಿಶ್ವ ಹಿಂದು ಪರಿಷತ್‌ನ ಮಾಜಿ ಮುಖಂಡ ಪ್ರವೀಣ್ ತೊಗಾಡಿಯಾ ಅವರು ಅಂತಾರಾಷ್ಟ್ರೀಯ ಹಿಂದು ಪರಿಷತ್ ಎಂಬ ನೂತನ  ಹಿಂದು ಸಂಘಟನೆಯೊಂದನ್ನು ಭಾನುವಾರ ಘೋಷಿಸಿದ್ದಾರೆ.  

ನವದೆಹಲಿ: ವಿಶ್ವ ಹಿಂದು ಪರಿಷತ್‌ನ ಮಾಜಿ ಮುಖಂಡ ಪ್ರವೀಣ್ ತೊಗಾಡಿಯಾ ಅವರು ಅಂತಾರಾಷ್ಟ್ರೀಯ ಹಿಂದು ಪರಿಷತ್ ಎಂಬ ನೂತನ ಹಿಂದು ಸಂಘಟನೆಯೊಂದನ್ನು ಭಾನುವಾರ ಘೋಷಿಸಿದ್ದಾರೆ. 

ನೂತನ ಸಂಘಟನೆ ಸ್ಥಾಪನೆ ಬಳಿಕ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ತೊಗಾಡಿಯಾ, ರಾಮ ಮಂದಿರವನ್ನು ನಿರ್ಮಿಸದೇ ಕೋಟ್ಯಂತರ ಹಿಂದುಗಳಿಗೆ ಕೇಂದ್ರ ಸರ್ಕಾರ ಮೋಸ ಮಾಡಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಿಂದು ಮತದಾರರನ್ನು ಒಂದು ಗೂಡಿಸಲು ನೂತನ ಹಿಂದು ಸಂಘಟನೆ ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ. ತೊಗಾಡಿಯಾ ಏಪ್ರಿಲ್‌ನಲ್ಲಿ ವಿಎಚ್‌ಪಿಯನ್ನು ತೊರೆದಿದ್ದರು.