ಪ್ರವೀಣ್ ತೊಗಾಡಿಯಾ ಕಾರಿಗೆ ಟ್ರಕ್ ಡಿಕ್ಕಿ; ಕೂದಲೆಳೆ ಅಂತರದಿಂದ ತೊಗಾಡಿಯಾ ಪಾರು

First Published 7, Mar 2018, 5:11 PM IST
Pravin Togadia escapes unhurt after truck hits his car
Highlights

ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದ್ದು  ತೊಗಾಡಿಯಾ ಕೂದಲೆಳೆ  ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ನವದೆಹಲಿ (ಮಾ. 07): ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದ್ದು  ತೊಗಾಡಿಯಾ ಕೂದಲೆಳೆ  ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಪ್ರವೀಣ್ ತೊಗಾಡಿಯಾ ಕಾರಿಗೆ ಸೂರತ್ ಸಮೀಪ ಟ್ರಕ್’ವೊಂದು ಡಿಕ್ಕಿ ಹೊಡೆದಿದೆ. ನನ್ನನ್ನು ಹತ್ಯೆ ಮಾಡಲು ಪಿತೂರಿ ನಡೆಸಲಾಗಿದೆ. Z-ಪ್ಲಸ್ ಸೆಕ್ಯುರಿಟಿ ಇಲ್ಲದೆಯೂ ಪೊಲೀಸರು ನನಗೆ ಎಸ್ಕಾರ್ಟ್’ಗಳನ್ನು ನೀಡಿಲ್ಲ. ನಾನು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ನನ್ನ ಭದ್ರತೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ದೂರು ನೀಡುತ್ತೇನೆ  ಎಂದಿದ್ದಾರೆ.  ಅದೃಷ್ಟವಶಾತ್  ಯಾರಿಗೂ ಏನೂ ಪ್ರಾಣಾಪಾಯವಾಗಿಲ್ಲ. 

loader