1986 ಬ್ಯಾಚ್'ನ ಐಪಿಎಸ್ ಅಧಿಕಾರಿಪ್ರವೀಣ್ ಸೂದ್ ಮೂಲತ: ಹಿಮಾಚಲ ಪ್ರದೇಶದವರು. ಎಡಿಜಿಪಿ ಅಲೋಕ್ ಮೋಹನ್ ಮತ್ತು ಪ್ರವೀಣ್ ಸೂದ್ ನಡುವೆ ಕಮೀಷನರ್ ಹುದ್ದೆಗೆ ಪೈಪೋಟಿ ನಡೆದಿತ್ತು.
ಬೆಂಗಳೂರು (ಜ.01): ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಎಡಿಜಿಪಿ ಪ್ರವೀಣ್ ಸೂದ್ ಅಧಿಕಾರ ಸ್ವೀಕರಿಸಿದ್ದಾರೆ.
1986 ಬ್ಯಾಚ್ನ ಐಪಿಎಸ್ ಅಧಿಕಾರಿಪ್ರವೀಣ್ ಸೂದ್ ಮೂಲತ: ಹಿಮಾಚಲ ಪ್ರದೇಶದವರು. ಎಡಿಜಿಪಿ ಅಲೋಕ್ ಮೋಹನ್ ಮತ್ತು ಪ್ರವೀಣ್ ಸೂದ್ ನಡುವೆ ಕಮೀಷನರ್ ಹುದ್ದೆಗೆ ಪೈಪೋಟಿ ನಡೆದಿತ್ತು.
ಅಂತಿಮವಾಗಿ, ಪ್ರವೀಣ್ ಸೂದ್ ಅವರಿಗೆ ಕಮಿಷನರ್ ಪಟ್ಟ ಒಲಿದಿದೆ. ಪೊಲೀಸ್ ಆಯುಕ್ತರ ಕಛೇರಿಯಲ್ಲಿ ನಿರ್ಗಮಿತ ಆಯುಕ್ತ ಎನ್ಎಸ್ ಮೇಘರಿಕ್, ನೂತನ ಆಯುಕ್ತರಿಗೆ ಬ್ಯಾಟನ್ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.
