ಭಾರತದ ಜ್ಞಾನ, ತಂತ್ರಜ್ಞಾನ ಪ್ರದರ್ಶನಕ್ಕೆ ವೇದಿಕೆಯಾಗಿದೆ. ನಾಳೆ ಯುವ ಪ್ರವಾಸಿ ದಿವಸ್ ಆರಂಭವಾಗುತ್ತಿದ್ದು, ನಾಡಿದ್ದು ಪ್ರಧಾನಿ ನರೇಂದ್ರ ಮೋದಿ ಪ್ರವಾಸಿ ಭಾರತೀಯ ದಿವಸ್ ಉದ್ಘಾಟಿಸಲಿದ್ದಾರೆ
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಪ್ರವಾಸಿ ಭಾರತೀಯ ದಿವಸ್ ನಡೆಯಲಿದೆ. ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿರುವ 14ನೇ ಪ್ರವಾಸಿ ಭಾರತೀಯ ದಿವಸ್ ನಾಳೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆರಂಭವಾಗಲಿದೆ.
ವಿದೇಶದಲ್ಲಿರುವ ಭಾರತೀಯರು ಮಾತೃ ದೇಶಕ್ಕೆ ಸಲ್ಲಿಸುವ ಸೇವೆ ಗೌರವಿಸುವ ಉದ್ದೇಶದಿಂದ ಆರಂಭವಾದ ಪ್ರವಾಸಿ ಭಾರತೀಯ ದಿವಸ್ನ ವ್ಯಾಪ್ತಿ ಈ ಬಾರಿ ವಿಸ್ತಾರವಾಗಿದೆ. ಭಾರತದ ಜ್ಞಾನ, ತಂತ್ರಜ್ಞಾನ ಪ್ರದರ್ಶನಕ್ಕೆ ವೇದಿಕೆಯಾಗಿದೆ. ನಾಳೆ ಯುವ ಪ್ರವಾಸಿ ದಿವಸ್ ಆರಂಭವಾಗುತ್ತಿದ್ದು, ನಾಡಿದ್ದು ಪ್ರಧಾನಿ ನರೇಂದ್ರ ಮೋದಿ ಪ್ರವಾಸಿ ಭಾರತೀಯ ದಿವಸ್ ಉದ್ಘಾಟಿಸಲಿದ್ದಾರೆ. ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹೆಚ್ಚು ಜವಾಬ್ದಾರಿ ವಹಿಸಿ ಆಯೋಜನೆ ಮಾಡುತ್ತಿದೆ.
ಕಾರ್ಯಕ್ರಮದಲ್ಲಿ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಗಳು ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ. ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಹಲವು ಇಲಾಖೆಗಳೂ ಸಹ ವಸ್ತು ಪ್ರದರ್ಶನದಲ್ಲಿ ಭಾಗಿಯಾಗುತ್ತಿವೆ. ಮೂರನೇ ದಿನ ಸಮಾರೋಪ ಸಮಾರಂಭದ ನೇತೃತ್ವವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಹಿಸಲಿದ್ದಾರೆ.
