ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಟಿಪ್ಪು ಸುಲ್ತಾನ್ ಜಯಂತಿ ಮಾಡುವುದು ಅರಣ್ಯ ಇಲಾಖೆ ವೀರಪ್ಪನ್ ಜಯಂತಿ ಮಾಡಿದಂತೆ. ರಾಜ್ಯ ಸರ್ಕಾರ ಹರಾಮ್ ಕೆಲಸ ಮಾಡುತ್ತಿದೆ, ಸಿದ್ರಾಮಯ್ಯನವರ ಹೆಸರು ಬದಲಾಗಿದೆ, ಸಿದ್ದರಾಮಯ್ಯ ಈಗ ಸುಲ್ತಾನ್ ಸಿದ್ದರಾಮಯ್ಯ ಆಗಿದ್ದಾರೆ ಸಂಸದ ಪ್ರತಾಪ್ ಸಿಂಹ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು(ಅ.04): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಟಿಪ್ಪು ಸುಲ್ತಾನ್ ಜಯಂತಿ ಮಾಡುವುದು ಅರಣ್ಯ ಇಲಾಖೆ ವೀರಪ್ಪನ್ ಜಯಂತಿ ಮಾಡಿದಂತೆ. ರಾಜ್ಯ ಸರ್ಕಾರ ಹರಾಮ್ ಕೆಲಸ ಮಾಡುತ್ತಿದೆ, ಸಿದ್ರಾಮಯ್ಯನವರ ಹೆಸರು ಬದಲಾಗಿದೆ, ಸಿದ್ದರಾಮಯ್ಯ ಈಗ ಸುಲ್ತಾನ್ ಸಿದ್ದರಾಮಯ್ಯ ಆಗಿದ್ದಾರೆ ಸಂಸದ ಪ್ರತಾಪ್ ಸಿಂಹ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿಂದು ಅಡ್ವೋಕೇಟ್ಸ್ ಫಾರ್ ಡೆಮಾಕ್ರಸಿ ಹಮ್ಮಿಕೊಂಡಿದ್ದ ಇತಿಹಾಸದ ಪುಟಗಳಲ್ಲಿ ಟಿಪ್ಪು ನಿಜ ಸ್ವರೂಪ ಕುರಿತ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಪ್ರತಾಪಸಿಂಹ, ಕನ್ನಡಿಗರ ಮೇಲೆ ಪರ್ಷಿಯನ್ ಭಾಷೆಯನ್ನ ಹೇರಲು ಮುಂದಾಗಿದ್ದವನು ಟಿಪ್ಪು, ಅವನ ಜಯಂತಿ ಆಚರಣೆಗೆ ಕನ್ನಡ ಸಂಸ್ಕೃತಿ ಇಲಾಖೆ ಮುಂದಾಗಿದೆ, ಇದು ಅರಣ್ಯ ಇಲಾಖೆ ವೀರಪ್ಪನ್ ಜಯಂತಿ ಮಾಡಿದಂತೆ. ಟಿಪ್ಪು ಹುಲಿಯಾಗಿದ್ದರೆ ಬ್ರಿಟೀಷರ ಜೊತೆ ಹೋರಾಡುತ್ತಿದ್ದ, ಯುದ್ಧ ಘೋಷಿಸಿದಾಗ ಹೆದರಿ ಅರಮನೆಯ ಒಳಗೆ ಕುಳಿತು ಸಂಧಾನ ಪತ್ರ ಬರೆಯುತ್ತಿರಲಿಲ್ಲ.
ಹೇಡಿತನದಿಂದ ಮೂರು ಕೋಟಿ ದಂಡ ಕಟ್ಟಿದವನು ಟಿಪ್ಪು. ಸ್ವಾತಂತ್ರ್ಯಕ್ಕಾಗಿ ಮಕ್ಕಳನ್ನ ಒತ್ತೆಯಿಟ್ಟವ. ಇತಿಹಾಸದಲ್ಲಿ ಯಾವ ಮುಸ್ಲಿಂ ರಾಜರೂ ಶೌರ್ಯ ತೋರಿಸಿಲ್ಲ, ಬದಲಾಗಿ ಕೌರ್ಯವನ್ನ ಪ್ರದರ್ಶನ ಮಾಡಿದ್ದೇ ಅವರ ಸಾಧನೆ. ಅವರು ಹಿಂದಿನಿಂದ ಚುಚ್ಚಿ ಕೊಲ್ಲುವವರೇ ವಿನಃ ಖಡ್ಗ ಹಿಡಿದು ಹೋರಾಡಿದವರಲ್ಲ ಅಂತ ಪ್ರತಾಪಸಿಂಹ ವಾಗ್ದಾಳಿ ನಡೆಸಿದ್ರು.
