ಪ್ರಮೋದ್ ಮಧ್ವರಾಜ್ ಬಿಜೆಪಿಗೆ?

First Published 20, Mar 2018, 6:45 PM IST
Pramod Madhvaraj join BJP
Highlights

ಮದ್ದೂರಿನಲ್ಲಿ ಎಸ್ ಎಂ ಕೃಷ್ಣರ ಪುತ್ರಿ ಶಾಂಭವಿಯನ್ನು  ನಿಲ್ಲಿಸಬೇಕೆಂದು ಯಡಿಯೂರಪ್ಪನವರು ಕೃಷ್ಣ ಅವರನ್ನು ಕೇಳಿಕೊಂಡಾಗ, ಮೋದಿ ಅಥವಾ ಅಮಿತ್ ಶಾ ಹೇಳಲಿ ಆಗ ಯೋಚಿಸುತ್ತೇನೆ ಎಂದು ಹೇಳಿದರಂತೆ. ಹೀಗಾಗಿ ಬಹುತೇಕ ಈ ಬಾರಿ ಅಮಿತ್ ಶಾ ಅವರು ಕೃಷ್ಣರ ಮನೆಗೆ ಹೋಗಿ ಪಾಲಿಟಿಕ್ಸ್ ಚರ್ಚೆ ಮಾಡುತ್ತಾರಂತೆ.

ಬೆಂಗಳೂರು (ಮಾ. 20): ಮದ್ದೂರಿನಲ್ಲಿ ಎಸ್ ಎಂ ಕೃಷ್ಣರ ಪುತ್ರಿ ಶಾಂಭವಿಯನ್ನು  ನಿಲ್ಲಿಸಬೇಕೆಂದು ಯಡಿಯೂರಪ್ಪನವರು ಕೃಷ್ಣ ಅವರನ್ನು ಕೇಳಿಕೊಂಡಾಗ, ಮೋದಿ ಅಥವಾ ಅಮಿತ್ ಶಾ ಹೇಳಲಿ ಆಗ ಯೋಚಿಸುತ್ತೇನೆ ಎಂದು ಹೇಳಿದರಂತೆ. ಹೀಗಾಗಿ ಬಹುತೇಕ ಈ ಬಾರಿ ಅಮಿತ್ ಶಾ ಅವರು ಕೃಷ್ಣರ ಮನೆಗೆ ಹೋಗಿ ಪಾಲಿಟಿಕ್ಸ್ ಚರ್ಚೆ ಮಾಡುತ್ತಾರಂತೆ.

ಮತ್ತೊಂದು ವಿಷಯ ಎಂದರೆ ಮೀನುಗಾರ ಸಮುದಾಯಕ್ಕೆ ಸೇರಿದ ಪ್ರಮೋದ್ ಮಧ್ವರಾಜರನ್ನು ಬಿಜೆಪಿಗೆ ಸೇರಿಸಲು ಅಮಿತ್ ಶಾ ‘ಎಸ್’ ಅಂದರೂ ಕೂಡ
ಪ್ರಮೋದ್ ಮಾತ್ರ ಇವತ್ತು ನಾಳೆ ಎಂದು ಸತಾಯಿಸುತ್ತಿದ್ದಾರಂತೆ. 

-ಪ್ರಶಾಂತ್ ನಾತು 

ರಾಜಕಾರಣದ ಹೆಚ್ಚಿನ ಓದಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

loader