ಎಲ್ಲಾ ಪಕ್ಷಗಳಲ್ಲಿಯೂ ಕಳ್ಳರಿದ್ದಾರೆ : ಪ್ರಕಾಶ್ ರೈ

Prakash Rai SLams Political Party
Highlights

ಯಾವ ರಾಜಕೀಯ ಪಕ್ಷಗಳು ಅಥವಾ ನಾಯಕರು ಜನಪರ ಕೆಲಸ ಮಾಡುವುದಿಲ್ಲ. ಎಲ್ಲ ಪಕ್ಷಗಳಲ್ಲೂ ಕಳ್ಳರಿದ್ದಾರೆ, ಚುನಾವಣೆ ಕಾರಣಕ್ಕೆ ಬರುತ್ತಿರುವ ನಾಯಕರ ಬಗ್ಗೆ ಜನರು ಹುಷಾರಾಗಿರಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.

ಬೆಂಗಳೂರು: ಯಾವ ರಾಜಕೀಯ ಪಕ್ಷಗಳು ಅಥವಾ ನಾಯಕರು ಜನಪರ ಕೆಲಸ ಮಾಡುವುದಿಲ್ಲ. ಎಲ್ಲ ಪಕ್ಷಗಳಲ್ಲೂ ಕಳ್ಳರಿದ್ದಾರೆ, ಚುನಾವಣೆ ಕಾರಣಕ್ಕೆ ಬರುತ್ತಿರುವ ನಾಯಕರ ಬಗ್ಗೆ ಜನರು ಹುಷಾರಾಗಿರಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.


ಕರ್ನಾಟಕ ವರ್ಕರ್ಸ್‌ ಯೂನಿಯನ್ ಮಂಗಳವಾರ ಬನ್ನಪ್ಪ ಪಾರ್ಕ್‌ನಲ್ಲಿ ‘ಕಾರ್ಮಿಕರ ದಿನಾಚರಣೆ’ ಅಂಗವಾಗಿ ಆಯೋಜಿಸಿದ್ದ ಕಾರ್ಮಿಕರ ಬಹಿರಂಗ ಸಭೆಯಲ್ಲಿ ಮಾತನಾಡಿದರು.


ಬಿಜೆಪಿಯನ್ನು ಬಿಟ್ಟು ಬೇರೆ ಯಾವ ಪಕ್ಷವನ್ನಾದರೂ ನಂಬಬಹುದು. ಏಕೆಂದರೆ, ಈ ಬೇರೆ ಪಕ್ಷಗಳು ಪ್ರತಿಭಟನೆ ಮಾಡಿದಾಗ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಲು ಪ್ರಯತ್ನಿಸುತ್ತಾರೆ.

ಆದರೆ, ಬಿಜೆಪಿ ಹೋರಾಟವನ್ನು ಹತ್ತಿಕ್ಕಿಬಾಯಿ ಮುಚ್ಚಿಸಲು ಮುಂದಾಗುತ್ತದೆ. ಹಾಗಾಗಿ ನಾವು ಕೂಡ ಚುನಾವಣೆಯಲ್ಲಿ ಪ್ಲಾನ್ ಮಾಡಿ ಒಬ್ಬೊಬ್ಬರನ್ನೇ ಕೆಳಗಿಳಿಸಬೇಕಿದೆ ಎಂದರು. ವಕೀಲ ಎಸ್.ಬಾಲನ್, ಕಾರ್ಮಿಕ ಮುಖಂಡರಾದ ಆರಾಧ್ಯ, ಪ್ರಭಾವತಿ, ಎಸ್. ಆರ್.ನಾಗರಾಜ್ ಮತ್ತಿತರರಿದ್ದರು.

loader