ರಸ್ತೆ ಗುಂಡಿ ಮುಚ್ಚಲು ಸಿಎಂ ಸಿದ್ದರಾಮಯ್ಯ ಪಾಲಿಕೆ ಅಧಿಕಾರಿಗಳಿಗೆ ನೀಡಿದ್ದ ಡೆಡ್ ಲೈನ್ ಇಂದಿಗೆ ಕೊನೆಯಾಗಿದೆ. ನೂರಕ್ಕೆ ನೂರರಷ್ಟು ಗುಂಡಿ ಮುಕ್ತ ನಗರವನ್ನಾಗಿ ಮಾಡಲು ಪಾಲಿಕೆ ಮತ್ತೆ ವಿಫಲವಾಗಿದೆ.
ಬೆಂಗಳೂರು (ನ.06): ರಸ್ತೆ ಗುಂಡಿ ಮುಚ್ಚಲು ಸಿಎಂ ಸಿದ್ದರಾಮಯ್ಯ ಪಾಲಿಕೆ ಅಧಿಕಾರಿಗಳಿಗೆ ನೀಡಿದ್ದ ಡೆಡ್ ಲೈನ್ ಇಂದಿಗೆ ಕೊನೆಯಾಗಿದೆ. ನೂರಕ್ಕೆ ನೂರರಷ್ಟು ಗುಂಡಿ ಮುಕ್ತ ನಗರವನ್ನಾಗಿ ಮಾಡಲು ಪಾಲಿಕೆ ಮತ್ತೆ ವಿಫಲವಾಗಿದೆ.
ವಿದ್ಯಾರಣ್ಯಪುರ ರಸ್ತೆ, ಶೇಷಾದ್ರಿಪುರಂ,ಲಗ್ಗೆರೆ, ಮಹದೇವಪುರ ರಸ್ತೆ, ಸೇರಿದಂತೆ ವಿವಿಧ ಕಡೆಯಲ್ಲಿ ಪಾಟ್ ಹೋಲ್ಸ್ ಹಾಗಿಯೆ ಇವೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಕಡೆಯ ಗಡುವು ಇದಾಗಿದ್ದು, ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಗುಂಡಿ ಕಂಡುಬಂದ್ರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದರು. ಅದರಂತೆ ಶೇ 98% ಗುಂಡಿಗಳನ್ನು ಮುಚ್ಚಲಾಗಿದ್ದು, ಅಂದಾಜು 800 ಪಾಟ್ ಹೋಲ್ಸ್'ಗಳಿವೆ ಎನ್ನಲಾಗುತ್ತಿದೆ. ಈ ಬಗ್ಗೆ ಬಿಬಿಎಂಪಿ ಮೇಯರ್ ಅವರನ್ನು ಪ್ರಶ್ನಿಸಿದಾಗ ನಾಳೆಯೊಳಗೆ ಬಾಕಿ ಇರುವ ಎಲ್ಲಾ ಗುಂಡಿಗಳನ್ನು ಮುಚ್ಚಲಾಗುತ್ತೆ ಅಂತಾ ತಿಳಿಸಿದರು.
ಹದಗೆಟ್ಟ ರಸ್ತೆಗಳ ದುರಸ್ಥಿಯ ಜವಾಬ್ದಾರಿ ಹೊತ್ತಿದ್ದ ಮುಖ್ಯ ಅಭಿಯಂತರ ಎಂ.ಆರ್.ವೆಂಕಟೇಶ್ ಕರ್ತವ್ಯ ಮರೆತಂತೆ ವರ್ತಿಸಿದರು. ಪಾಲಿಕೆಯಲ್ಲಾಗಲಿ ಅಥವಾ ಫೀಲ್ಡ್ ನಲ್ಲಿ ಅವರು ಕಾಣಿಸುತ್ತಲೇ ಇರಲಿಲ್ಲ. ಬಿಬಿಎಂಪಿ ಮೇಲಧಿಕಾರಿಗಳ ಸಂಪರ್ಕಕ್ಕೂ ಸಿಗದೆ ಇರೋದು ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.ಇದೆಲ್ಲದರ ಮಾಹಿತಿ ಬರುತ್ತಿದ್ದಂತೆ ಅಧಿಕಾರಿಗಳ ಚುರುಕ್ ಮುಟ್ಟಿಸುವ ಕಾರ್ಯವನ್ನು ಮೇಯರ್ ಸಂಪತ್ ರಾಜ್ ಮಾಡಿದರು.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪಾಲಿಕೆ ಅಧಿಕಾರಿಗಳಿಗೆ ನೀಡಿರುವ ಡೆಡ್ ಲೈನ್ ಅಂತ್ಯಗೊಂಡಿದೆ. ಈ ಬಾರಿಯೂ ಅಧಿಕಾರಿಗಳು ಗುಂಡಿ ಮುಕ್ತ ನಗರವನ್ನಾಗಿಸಲು ವಿಫಲರಾಗಿದ್ದಾರೆ. ನಾಳೆ ಮೇಯರ್, ಆಯುಕ್ತರು ಪರಿಶೀಲನೆ ಕಾರ್ಯದಲ್ಲಿ ತೊಡಗಲಿದ್ದು, ಆ ಸಂದರ್ಭದಲ್ಲಿ ಪಾಟ್ ಹೋಲ್ಸ್ ಕಂಡುಬಂದ್ರೆ ಅಧಿಕಾರಿಗಳು ಸಸ್ಪೆಂಡ್ ಆಗೋದು ಮಾತ್ರ ಖಚಿತ.
