ಅಮೇಠಿಯಲ್ಲಿ ರಾಹುಲ್ ಗಾಂಧಿ ‘ರಾಮ’, ಮೋದಿ ‘ರಾವಣ’!

First Published 15, Jan 2018, 9:45 PM IST
Posters Depicting Modi As Ravana Comes Up in Amethi
Highlights

ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ ಅಮೇಠಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣನಿಗೆ ಹೋಲಿಸಲಾದ ಪೋಸ್ಟರ್’ಗಳನ್ನು ಅಂಟಿಸಲಾಗಿದೆ.

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ ಅಮೇಠಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣನಿಗೆ ಹೋಲಿಸಲಾದ ಪೋಸ್ಟರ್’ಗಳನ್ನು ಅಂಟಿಸಲಾಗಿದೆ.

ಪೋಸ್ಟರ್’ಗಳಲ್ಲಿ ಮೋದಿ ರಾವಣರಾಗಿದ್ದು, ರಾಹುಲ್ ಗಾಂಧಿ ಬಿಲ್ಲು ಬಾಣ ಹಿಡಿದು ಮೋದಿಯತ್ತ ಗುರಿ ಹಿಡಿದಿದ್ದಾರೆ.

ರಾಹುಲ್ ನೀವು ರಾಮನ ಅವತಾರವಾಗಿದ್ದೀರಿ, 2019ರಲ್ಲಿ ರಾಹುಲ್ ರಾಜ್ (ರಾಮ್ ರಾಜ್) ಆರಂಭವಾಗಲಿದೆ ಎಂದು ಆ ಪೋಸ್ಟರ್’ನಲ್ಲಿ ಬರೆಯಲಾಗಿದೆ.

ಈ ಪೋಸ್ಟರ್ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಪಕ್ಷವು ಅಂತಹ ಪೋಸ್ಟರ್’ಗಳನ್ನು ಹಾಕಿರುವುದನ್ನು ನಿರಾಕರಿಸಿದೆ.

ರಾಹುಲ್ ಗಾಂಧಿ ಅಮೇಠಿಯಲ್ಲಿ 2 ದಿನದ ಪ್ರವಾಸದಲ್ಲಿದ್ದು, ಎಲ್ಲಾ 5 ವಿಧಾನಸಭಾ ಕ್ಷೇತ್ರಗಳ ಜನರನ್ನುದ್ದೇಶಿ ಮಾತನಾಡಲಿದ್ದಾರೆ.

(  ಫೋಟೋ: ಎಎನ್ಐ)

loader