ರಾಮ್ ಜಾಸ್ ಕಾಲೇಜಿನ ಪ್ರಕರಣದಿಂದ ದೇಶದಾದ್ಯಂತ ರಾಷ್ಟ್ರೀಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಚರ್ಚೆಯಾಗುತ್ತಿರುವಾಗ 'ಕಾಶ್ಮೀರಕ್ಕೆ ಸ್ವಾತಂತ್ರ' ಎನ್ನುವ ಬೇಡಿಕೆಯಿರುವ ನಾಮಫಲಕವೊಂದು ಜೆಎನ್ ಯು ಕ್ಯಾಂಪಸ್ ನಲ್ಲಿ ಇಂದು ಕಂಡು ಬಂದಿದೆ.

ನವದೆಹಲಿ (ಮಾ.03): ರಾಮ್ ಜಾಸ್ ಕಾಲೇಜಿನ ಪ್ರಕರಣದಿಂದ ದೇಶದಾದ್ಯಂತ ರಾಷ್ಟ್ರೀಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಚರ್ಚೆಯಾಗುತ್ತಿರುವಾಗ 'ಕಾಶ್ಮೀರಕ್ಕೆ ಸ್ವಾತಂತ್ರ' ಎನ್ನುವ ಬೇಡಿಕೆಯಿರುವ ನಾಮಫಲಕವೊಂದು ಜೆಎನ್ ಯು ಕ್ಯಾಂಪಸ್ ನಲ್ಲಿ ಇಂದು ಕಂಡು ಬಂದಿದೆ.

'ಕಾಶ್ಮೀರಕ್ಕೆ ಸ್ವಾತಂತ್ರ, ಪ್ಯಾಲೇಸ್ತೇನ್ ಗೆ ಸ್ವಾತಂತ್ರ,, ಸ್ವಯಂ ಅಧಿಕಾರ ಚಿರಾಯುವಾಗಲಿ' ಎಂದು ಪೋಸ್ಟರ್ ನಲ್ಲಿ ಬರೆದುಕೊಂಡಿದೆ. ಇದರ ಕೆಳಗೆ ಡೆಮಾಕ್ರೆಟಿಕ್ ಸ್ಟುಡೆಂಟ್ ಯೂನಿಯನ್ ನ ಸಹಿಯನ್ನು ಹಾಕಲಾಗಿದೆ. ಇವತ್ತು ಸಂಜೆಯೊಳಗೆ ಈ ಪೋಸ್ಟರನ್ನು ತೆಗೆದು ಹಾಕುವಂತೆ ಜೆ ಎನ್ ಯು ಅಧಿಕಾರಿಗಳು ಭದ್ರತಾ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.

ಯಾರು ಇದನ್ನು ಇಟ್ಟಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಪೋಸ್ಟರನ್ನು ತೆರವುಗೊಳಿಸುವಂತೆ ನಾವು ಸೂಚಿಸಿದ್ದೇವೆ ಎಂದು ಜೆಎನ್ ಯು ಅಧಿಕಾರಿಗಳು ಹೇಳಿದ್ದಾರೆ.