ಶೀಘ್ರವೇ ದೇಶಾದ್ಯಂತ ಪೇಮೆಂಟ್‌ ಬ್ಯಾಂಕ್‌ನ ಶಾಖೆ ಆರಂಭಿಸುವುದಾಗಿ ಭಾರತೀಯ ಅಂಚೇ ಇಲಾಖೆ ಹೇಳಿದೆ. ಮುಂದಿನ ಮೇ- ಸೆಪ್ಟೆಂಬರ ಅವಧಿಯಲ್ಲಿ 650 ಪೇಮೆಂಟ್‌ ಬ್ಯಾಂಕ್‌ ಶಾಖೆ ಆರಂಭವಾಗಲಿದೆ.

ನವದೆಹಲಿ: ಶೀಘ್ರವೇ ದೇಶಾದ್ಯಂತ ಪೇಮೆಂಟ್‌ ಬ್ಯಾಂಕ್‌ನ ಶಾಖೆ ಆರಂಭಿಸುವುದಾಗಿ ಭಾರತೀಯ ಅಂಚೇ ಇಲಾಖೆ ಹೇಳಿದೆ. ಮುಂದಿನ ಮೇ- ಸೆಪ್ಟೆಂಬರ ಅವಧಿಯಲ್ಲಿ 650 ಪೇಮೆಂಟ್‌ ಬ್ಯಾಂಕ್‌ ಶಾಖೆ ಆರಂಭವಾಗಲಿದೆ.

ಜೊತೆಗೆ ದೇಶಾದ್ಯಂತ ಇರುವ 1.55 ಲಕ್ಷ ಅಂಚೆ ಕಚೇರಿಗಳು, ಗ್ರಾಹಕರಿಗೆ ಪೇಮೆಂಟ್‌ ಬ್ಯಾಂಕ್‌ನ ಸೇವೆ ಪಡೆಯಲು ಅನುವು ಮಾಡಿಕೊಡಲಿವೆ.

1450 ಕೋಟಿ ರು. ಬಂಡವಾಳ ಹೂಡಿಕೆಯೊಂದಿಗೆ ಇವುಗಳನ್ನು ಆರಂಭಿಸಲಾಗುವುದು ಎಂದು ಅಂಚೆ ಕಾರ್ಯದರ್ಶಿ ಅನಂತ ನಾರಾಯಣ ನಂದಾ ತಿಳಿಸಿದ್ದಾರೆ.