ಬೆಳಗಾವಿಯಲ್ಲಿ ಅಂಚೆ ಕಚೇರಿಯ ಪಾಸ್’ಪೋರ್ಟ್ ಸೇವಾಕೇಂದ್ರ

Post Office Passport Seva Kendra At Belagavi
Highlights

  • ಬೆಳಗಾವಿ ಜಿಲ್ಲೆಯ ಜನರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ.
  • ಪಾಸ್’ಪೋರ್ಟ್ ಮಾಡಿಸಲು ಬಯಸುವವರಿಗೆ ಹೊಸ ಸೌಲಭ್ಯ!

ಬೆಂಗಳೂರು : ಬೆಳಗಾವಿ ಜಿಲ್ಲೆಯ ಜನರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಪಾಸ್’ಪೋರ್ಟ್ ಮಾಡಿಸಲು ಬಯಸುವವರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವದಿಂದ ಹೊಸ ಸೌಲಭ್ಯ!

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಂಚೆ ಇಲಾಖೆಯೊಡನೆ ಪಾಲುದಾರಿಕೆಯಲ್ಲಿ ಬೆಳಗಾವಿಯಲ್ಲಿ ಪೋಸ್ಟ್ ಆಫಿಸ್ ಪಾಸ್’ಪೋರ್ಟ್ ಸೇವಾ ಕೇಂದ್ರವನ್ನು (POPSK) ಆರಂಭಿಸಲಿದೆ.

ರೈಲ್ವೇ ನಿಲ್ದಾಣದ ಬಳಿಯಿರುವ ಕ್ಯಾಂಪ್ (590001) ಅಂಚೆ ಕಚೇರಿಯಲ್ಲಿ ಈ ಸೇವಾಕೇಂದ್ರವು ಫೆ.14ರಂದು ಕಾರ್ಯಾರಂಭ ಮಾಡಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಫೆ,12ರಿಂದ 50 ಅಪಾಯಿಂಟ್’ಮೆಂಟ್’ಗಳನ್ನು ಬಿಡುಗಡೆ ಮಾಡಲಾಗುವುದು. ಸಂಭಾವ್ಯ ಅರ್ಜಿದಾರರು  ಅಪಾಯಿಂಟ್’ಮೆಂಟನ್ನು ಆನ್’ಲೈನ್’ನಲ್ಲಿ ತೆಗೆದುಕೊಳ್ಳಬಹುದು ಮತ್ತು ನಿಗದಿಪಡಿಸಲಾದ ದಿನಾಂಕ/ಸಮಯದಲ್ಲಿ POPSK ಗೆ ಭೇಟಿ ನೀಡಿ ತಮ್ಮ ಅರ್ಜಿಯನ್ನು ಸಂಸ್ಕರಿಸಬಹುದು, ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ  ಅಧಿಕೃತ ವೆಬ್’ಸೈಟ್ http://www.passportindia.gov.in/ ಗೆ ಭೇಟಿ ನೀಡಬಹುದು

loader