Asianet Suvarna News Asianet Suvarna News

ಆಧಾರ್, ದಾಖಲೆ ಪತ್ರಗಳನ್ನು ವಿತರಿಸದೆ ಮಣ್ಣಿನಲ್ಲಿ ಹೂತಿಟ್ಟ ಅಂಚೆ ಇಲಾಖೆ ನೌಕರ!

ಚಾಮರಾಜನಗರದಲ್ಲಿ ಅಂಚೆ ಇಲಾಖೆ ನೌಕರ ಆಧಾರ್ ಕಾರ್ಡ್ ಸೇರಿದಂತೆ ಇತರೆ ನೂರಾರು ದಾಖಲೆಗಳು, ಪತ್ರಗಳನ್ನು ಮಣ್ಣಿನಲ್ಲಿ ಹೂತಿಟ್ಟಿದ್ದ ಪ್ರಕರಣ ಬಯಲಾಗಿದೆ.

Post man kept all the important documents under the soil

ಚಾಮರಾಜನಗರ(ಜು.12): ಚಾಮರಾಜನಗರದಲ್ಲಿ ಅಂಚೆ ಇಲಾಖೆ ನೌಕರ ಆಧಾರ್ ಕಾರ್ಡ್ ಸೇರಿದಂತೆ ಇತರೆ ನೂರಾರು ದಾಖಲೆಗಳು, ಪತ್ರಗಳನ್ನು ಮಣ್ಣಿನಲ್ಲಿ ಹೂತಿಟ್ಟಿದ್ದ ಪ್ರಕರಣ ಬಯಲಾಗಿದೆ.

ಕೊಳ್ಳೆಗಾಲ ತಾಲೂಕಿನ ಲೊಕ್ಕನಹಳ್ಳಿಯಲ್ಲಿ ಪೋಸ್ಟ್'ಮ್ಯಾನ್ ನಾಗರಾಜ್ ಎಂಬಾತ ಅಂಚೆಚೀಟಿಗಳನ್ನು ವಿತರಿಸದೆ ಮಣ್ಣಿನಲ್ಲಿ ಹೂತ್ತಿಟ್ಟಿದ್ದಾನೆ. ಅಂಚೆ ಕಚೇರಿ ಮುಂಭಾಗದ ನಿವೇಶನವೊಂದರಲ್ಲಿ ಹೂತಿಟ್ಟಿದ್ದು, ನಿವೇಶನದ ಮಾಲೀಕ ಪಾಯ ತೆಗೆದಾಗ ಆಧಾರ್​ ಕಾರ್ಡ್​ಗಳು ಸಿಕ್ಕಿವೆ.  

ಪೋಸ್ಟ್ ಮ್ಯಾನ್ ನಾಗರಾಜ್ 2013 ರಿಂದಲೂ ಸಾರ್ವಜನಿಕರಿಗೆ ನೂರಾರು ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಸರ್ಕಾರಿ ಕಚೇರಿಗೆ ಬಂದಿರುವ ಪತ್ರಗಳನ್ನು ವಿತರಿಸಿಲ್ಲ. ನಿರ್ಲಕ್ಷ್ಯ ಎಸಗಿರುವ ಪೋಸ್ಟ್ ಮ್ಯಾನ್ ನಾಗರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಪೋಸ್ಟ್ ಮ್ಯಾನ್ ಮಾಡಿದ ಎಡವಟ್ಟಿನಿಂದ ಲೊಕ್ಕನಹಳ್ಳಿ, ಕೌಳ್ಳಿಹಳ್ಳ ಡ್ಯಾಂ, ಬೋರೆದೊಡ್ಡಿ, ಜಡೇಸ್ವಾಮಿದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆಧಾರ್ ಕಾರ್ಡ್ ತಲುಪದೆ ಸರ್ಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿದ್ದಾರೆ.

 

Follow Us:
Download App:
  • android
  • ios