ಪೋಸ್ಟ್ ಕಾರ್ಡ್ ಪ್ರಚೋದನಾಕಾರಿ ಪ್ರಕರಣ: ವಿಕ್ರಂ ಹೆಗಡೆ 3 ದಿನಗಳ ಕಾಲ ಸಿಸಿಬಿ ವಶಕ್ಕೆ

First Published 3, Apr 2018, 5:41 PM IST
Post Card Portal Accuse 3 days CCB Custody
Highlights

ಪೋಸ್ಟ್ ಕಾರ್ಡ್ ಆನ್ ಲೈನ್ ಪೋರ್ಟಲ್ನಿಂದ ಪ್ರಚೋದನಕಾರಿ ಪ್ರಕರಣದಡಿಯಲ್ಲಿ  ಆರೋಪಿ ಮಹೇಶ್ ವಿಕ್ರಂ ಹೆಗಡೆಯನ್ನ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಬೆಂಗಳೂರು (ಏ. 03):  ಪೋಸ್ಟ್ ಕಾರ್ಡ್ ಆನ್ ಲೈನ್ ಪೋರ್ಟಲ್ನಿಂದ ಪ್ರಚೋದನಕಾರಿ ಪ್ರಕರಣದಡಿಯಲ್ಲಿ  ಆರೋಪಿ ಮಹೇಶ್ ವಿಕ್ರಂ ಹೆಗಡೆಯನ್ನ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಇದೇ ತಿಂಗಳ 5 ನೇ ತಾರೀಖಿನವರೆಗೂ  1ನೇ ಎಸಿಎಂಎಂ ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.  ಡಿಸಿಪಿ ಜಿನೇಂದ್ರ ಕಣವಿ ನೇತೃತ್ವದಲ್ಲಿ ಹೆಚ್ಚಿನ  ವಿಚಾರಣೆಗೆ ಒಳಪಡಿಸಲಾಗಿದೆ. 

ಕಳೆದೊಂದು ವರ್ಷದಿಂದ ಪೋಸ್ಟ್ ಕಾರ್ಡ್ ವೆಬ್ಸೈಟ್ನಲ್ಲಿ ಪ್ರಕಟವಾದ ಸುದ್ದಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಸುದ್ದಿಗಳ ಬಗ್ಗೆ ವಿಚಾರಣೆ ನಡೆಸಲಾಗಿದೆ.  ಈ ಹಿಂದೆ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೇಸ್ ಬಗ್ಗೆ ತನಿಖೆ , ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ವಿರುದ್ಧ ಅವಹೇಳನಕಾರಿ ಸುದ್ದಿ ಬಿತ್ತರಿಸಿದ್ದ ಆರೋಪ ಎಲ್ಲಾ ಆಯಾಮಗಳಲ್ಲೂ  ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

loader