ಇತಿಹಾಸ ನಿರ್ಮಿಸೋ ಒಂದು ಉತ್ತಮ ಅವಕಾಶ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿದೆ. ಸಿಎಂ ಮನಸ್ಸು ಮಾಡಿದರೆ ರಾಜ್ಯ ಸರ್ಕಾರದ ಎರಡು ಪ್ರಮುಖ ಹುದ್ದೆಗಳಿಗೆ ಮಹಿಳೆಯರು ನೇಮಕಗೊಳ್ಳುವ ಅವಕಾಶವಿದೆ.

ಬೆಂಗಳೂರು (ಅ. 03): ಇತಿಹಾಸ ನಿರ್ಮಿಸೋ ಒಂದು ಉತ್ತಮ ಅವಕಾಶ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿದೆ. ಸಿಎಂ ಮನಸ್ಸು ಮಾಡಿದರೆ ರಾಜ್ಯ ಸರ್ಕಾರದ ಎರಡು ಪ್ರಮುಖ ಹುದ್ದೆಗಳಿಗೆ ಮಹಿಳೆಯರು ನೇಮಕಗೊಳ್ಳುವ ಅವಕಾಶವಿದೆ.

ಒಂದು ರಾಜ್ಯ ಸರ್ಕಾರದ ಮುಖ್ಯಕಾಯದರ್ಶಿ ಹುದ್ದೆ ಮತ್ತೊಂದು ಪೊಲೀಸ್ ಮಹಾ ನಿರ್ದೇಶಕರ ಹುದ್ದೆ. ಹಾಲಿ ಈಗಿರುವ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಅವರು ಇದೇ ನವೆಂಬರ್ ಅಂತ್ಯಕ್ಕೆ ನಿವೃತ್ತರಾಗಲಿದ್ದು, ಮುಂದಿನ ಸಿಎಸ್ ಯಾರು ಅನ್ನೋ ಬಗ್ಗೆ ಕುತೂಹಲ ನಿರ್ಮಾಣವಾಗಿದೆ. ಕುಂಟಿಯಾ ಕೇಂದ್ರ ಸೇವೆಯಿಂದ ಅನಿರೀಕ್ಷಿತವಾಗಿ ರಾಜ್ಯ ಸೇವೆಗೆ ವಾಪಸ್ಸಾದಂತೆ ಮತ್ಯಾರು ಬರದಿದ್ದರೆ ಹಾಲಿ ಅಪರ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಹಾಗೂ ಅಭಿವೃದ್ಧಿ ಆಯುಕ್ತ ಟಿ ಎಂ ವಿಜಯಭಾಸ್ಕರ್ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ.

ಇನ್ನೂ ಇದೇ ತಿಂಗಳ ಅಂತ್ಯಕ್ಕೆ ಪೊಲೀಸ್ ಮಹಾನಿರ್ದೇಶಕ ಆರ್ ಕೆ ದತ್ತ ನಿವೃತ್ತಿಯಾಗಲಿದ್ದು, ಅವರ ಸ್ಥಾನಕ್ಕೆ ಅಗ್ನಿಶಾಮಕ ಡಿಜಿಪಿ ನೀಲಮಣಿ, ಎನ್ ರಾಜು, ಸಿಐಡಿ ಡಿಜಿಪಿ ಹೆಚ್ ಸಿ ಕಿಶೋರ ಚಂದ್ರ, ಎಸಿಬಿ ಡಿಜಿಪಿ ಎಂ ಎನ್ ರೆಡ್ಡಿ ರೇಸನಲ್ಲಿದ್ದಾರೆ. ಇದ್ರಲ್ಲಿ ಕೀಶೊರ್ ಚಂದ್ರ ಮತ್ತು ನೀಲಮಣಿ ಕನ್ನಡಿಗರಾಗಿದ್ದಾರೆ. ರಾಜ್ಯೋತ್ಸವದ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಕನ್ನಡಿಗರಿಗೆ ಆಧ್ಯತೆ ನೀಡ್ತಾರಾ ಸಿದ್ದರಾಮಯ್ಯ ಅನ್ನೋ ಕುತೂಹಲ ಮಣೆ ಮಾಡಿದೆ. ಒಂದು ವೆಳೆ, ಪ್ರಮುಖ ಎರಡು ಹುದ್ದೆಗಳನ್ನು ಮಹಿಳೆಯರಿಗೆ ನೀಡಿದ್ದೇ ಆದಲ್ಲಿ ಒಂದು ಇತಿಹಾಸ ನಿರ್ಮಿಸಿದ ಕೀರ್ತಿ ಸಿಎಂಗೆ ಬರಲಿದೆ.