ಪೋರ್ನ್ ಸೈಟ್ ಗಳ ನಿಷೇಧಕ್ಕೆ ಸಂಬಂಧಿಸಿ ಇಷ್ಟೊಂದು ಚರ್ಚೆಗಳಾಗುತ್ತಿರುವಾಗ ಇನ್ನೊಂದು ಸಮೀಕ್ಷಾ ಸುದ್ದಿ ಅಂದುಕೊಳ್ಳುತ್ತಿರೋ, ಶ್ರೇಯಾಂಕದ ಸುದ್ದಿ ಅಂಥ ಭಾವಿಸಿತ್ತಿರೋ .. ನಿಮಗೆ ಬಿಟ್ಟಿದ್ದು.
ಬೆಂಗಳೂರು[ಅ.30] ಪೋರ್ನ್ ಸೈಟ್ ಗಳ ಬ್ಯಾನ್ ಸಂಬಂಧ ಪರ ವಿರೋಧವಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆದೆ ಇವೆ. ಭಾರತದಲ್ಲಿ ಇವನ್ನು ಇಟ್ಟುಕೊಳ್ಳಬೇಕೆ? ಬೇಡವೇ? ಎಂಬುದು ಸದ್ಯದ ಬಹುಚರ್ಚಿತ ವಿಚಾರಗಳಲ್ಲಿ ಒಂದು.
ಆದರೆ ಭಾರತ ವಿಶ್ವದಲ್ಲೇ ಪೋರ್ನ್ ಸೈಟ್ ಗಳಿಗೆ ದೊಡ್ಡ ಮಾರುಕಟ್ಟೆಗಳಲ್ಲಿ ಒಂದು. ಪೋರ್ನ್ ಹಬ್ ಎಕನ್ನುವ ಅಶ್ಲೀಲ ಸೈಟ್ ನ ಮಾರುಕಟ್ಟೆ ಶೇ.121 ರಷ್ಟು ಏರಿಕೆ ಸಧಿಸಿದೆ. ಅದು 2013ರಿಂದ 2017ರ ಅವಧಿಯಲ್ಲಿ.
ಪೋರ್ನ್ ನಿಷೇಧ ಸಾಧ್ಯವೇ ಇಲ್ಲ, ಸರ್ಕಾರಕ್ಕೆ ಸೈಟ್‌ಗಳ ಸವಾಲ್! ಕಾರಣ..
ಯುಎಸ್ ಮತ್ತು ಯುಕೆ ಬಿಟ್ಟರೆ ಪ್ರಪಂಚದಲ್ಲಿ ಅತಿ ಹೆಚ್ಚು ಪೋರ್ನ್ ವೀಕ್ಷಣೆ ಮಾಡುವುದು ಭಾರತದಲ್ಲಿ. ಹಾಗಾಗಿಯೇ ಸರಕಾರ ಪ್ರಮುಖ ವೆಬ್ ತಾಣಗಳ ಮೇಲೆ ಬ್ಯಾನ್ ಪ್ರಯೋಗಕ್ಕೆ ಮುಂದಾದರೆ ಬೇರೊಂದು ಹೆಸರಿನಲ್ಲಿ ತೆರೆದುಕೊಳ್ಳುತ್ತಲೇ ಇರುತ್ತವೆ.
