ಈ ನೌಕಾದಳದ ಅಧಿಕಾರಿ  ತನ್ನ ಹೆಂಡತಿಯ ಪೋಟೋಗಳನ್ನೆ ಅಶ್ಲೀಲ ತಾಣಗಳಿಗೆ ಅಪ್‌ಲೋಡ್ ಮಾಡಿದ್ದ. ಹೆಂಡತಿಯ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಮಾರ್ಪಡಿಸಿ ಹಾಕುತ್ತಿದ್ದವನ್ನ್ನು ಪೊಲೀಸರು ಬಂಧಿಸಿದ್ದಾರೆ.

ಪುಣೆ[ನ.29] ಅಶ್ಲೀಲ ಸಿನಿಮಾ ನೋಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದ ನೌಕಾದಳದ ಅಧಿಕಾರಿಯೊಬ್ಬರು ತನ್ನ ಹೆಂಡತಿಯ ಫೋಟೋಗಳನ್ನೇ ಅಶ್ಲೀಲ ಚಿತ್ರಗಳಾಗಿ ಬದಲಾಯಿಸಿ ಆನ್​ಲೈನ್​ಗೆ ಅಪ್‌ಲೋಡ್‌ ಮಾಡುತ್ತಿದ್ದ ಶಾಕಿಂಗ್ ವಿಚಾರ ಬಹಿರಂಗವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

39 ವರ್ಷದ ನೌಕಾ ಅಧಿಕಾರಿ, ಆನ್​ಲೈನ್​ ಅಪ್ಲಿಕೇಶನ್​ ಸಹಾಯದಿಂದ ತಮ್ಮ ಹೆಂಡತಿಯ ಚಿತ್ರಗಳನ್ನು ಅಪ್‌ಲೋಡ್‌ ಮಾಡುತ್ತಿದ್ದ. ಪುಣೆ ಪೊಲೀಸರು ಅಧಿಕಾರಿಯನ್ನು ಬಂಧಿಸಿದ್ದಾರೆ. 

ನಿವೃತ್ತ ಸೇನಾಧಿಕಾರಿ ಆಗಿರುವ ಅಧಿಕಾರಿಯ ಹೆಂಡತಿ ನೀಡಿದ ದೂರಿನ ಆಧಾರದ ಮೇಲೆ ಅಧಿಕಾರಿಯನ್ನು ಬಂಧಿಸಲಾಗಿದೆ. ಗಂಡನ ಜತೆ ದೆಹಲಿಯಲ್ಲಿದ್ದ ಈಕೆ ಅಲ್ಲೇ ಗಂಡನ ಸ್ವಭಾವದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ನೋಡಿ ಪ್ರಶ್ನಿಸಿದ್ದಾರೆ. ನಂತರ ಅದಕ್ಕೆ ಗಂಡನಿಂದ ಯಾವುದೇ ಉತ್ತರ ಬರಲಿಲ್ಲ ಇದಾದ ಮೇಲೆ ಮಹಿಳೆ ಅನುಮಾನಗೊಂಡು ಪೊಲೀಸರ ಮೊರೆ ಹೋಗಿದ್ದಾರೆ.