Asianet Suvarna News Asianet Suvarna News

Pundit Shivakumar Sharma No More: ಖ್ಯಾತ ಸಂತೂರ್‌ ವಾದಕ ಇನ್ನಿಲ್ಲ

Pundit Shivkumar Sharma dies at 80: ಪದ್ಮವಿಭೂಷಣ ಪಂಡಿತ್‌ ಶಿವಕುಮಾರ್‌ ಶರ್ಮ ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ. ದೇಶದ ಸಾಂಸ್ಕೃತಿಕ ಲೋಕಕ್ಕೆ ಖ್ಯಾತ ಸಂತೂರ್‌ ವಾದಕ ಪಂಡಿತ್‌ ಶಿವಕುಮಾರ್‌ ಶರ್ಮ ಅವರ ಕೊಡುಗೆ ಅಪಾರ. ಅವರಿಗೆ 80 ವರ್ಷ ವಯಸ್ಸಾಗಿದ್ದು, ವಯೋಸಹಜ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ. 

popular santoor maestro pundit shivkumar sharma passed away
Author
Bengaluru, First Published May 10, 2022, 1:39 PM IST | Last Updated May 10, 2022, 1:44 PM IST

ಪದ್ಮವಿಭೂಷಣ ಪಂಡಿತ್‌ ಶಿವಕುಮಾರ್‌ ಶರ್ಮ ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ. ದೇಶದ ಸಾಂಸ್ಕೃತಿಕ ಲೋಕಕ್ಕೆ ಖ್ಯಾತ ಸಂತೂರ್‌ ವಾದಕ ಪಂಡಿತ್‌ ಶಿವಕುಮಾರ್‌ ಶರ್ಮ (Pundit Shivkumar Sharma no more) ಅವರ ಕೊಡುಗೆ ಅಪಾರ. ಅವರಿಗೆ 84 ವರ್ಷ ವಯಸ್ಸಾಗಿದ್ದು, ವಯೋಸಹಜ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ. 

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರು ಸಹ ಪ್ರತಿಕ್ರಿಯಿಸಿದ್ದು, ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಪಂಡಿತ್‌ ಶಿವಕುಮಾರ್‌ ಶರ್ಮ ಅವರ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೆ ತುಂಬಲಾಗ ನಷ್ಟ. ಅವರ ಸಾವಿನ ನೋವು ಬರಿಸುವ ಶಕ್ತಿಯನ್ನು ಕುಟುಂಬಕ್ಕೆ ಮತ್ತು ಕಲಾರಂಗಕ್ಕೆ ಕಲ್ಪಿಸಲಿ ಎಂದು ಪ್ರಧಾನಿ ಪ್ರಾರ್ಥಿಸಿದ್ದಾರೆ. 

 

ಕಳೆದ ಕೆಲ ತಿಂಗಳುಗಳಿಂದ ಅವರು ಮೈತ್ರಪಿಂಡ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರು. ವಯಸ್ಸು ಕೂಡ ಹೆಚ್ಚಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೇಶ ಕಂಡ ನಿಷ್ಣಾತ ಸಂತೂರ್‌ ವಾದಕರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಶಿವಕುಮಾರ್‌ ಶರ್ಮ ಸಾಹಿತ್ಯ ಲೋಕಕ್ಕೆ ಆನೆಗಾತ್ರದ ಕೊಡುಗೆ ನೀಡಿದ್ದಾರೆ. ತಮ್ಮ ಕೆಲಸದಿಂದ ಅಸಂಖ್ಯಾತ ಅಭಿಮಾನಿಗಳನ್ನು ಪಡೆದಿದ್ದಾರೆ. 

Latest Videos
Follow Us:
Download App:
  • android
  • ios