ರಸ್ತೆ ಅಪಘಾತದಲ್ಲಿ ರೇಡಿಯೊ ಮಿರ್ಚಿ ಆರ್ ಜೆ ಸಾವು

Popular RJ Tania Khanna of Radio Mirchi died in car accident
Highlights

ದಿಲ್ಲಿ - ಎನ್’ಸಿಆರ್ ಪ್ರದೇಶದಲ್ಲಿ ನಿನ್ನೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ರೇಡಿಯೊ  ಜಾಕಿಯೋರ್ವರು ಮೃತಪಟ್ಟಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಕಾಲುವೆಗೆ ಉರುಳಿ ದುರ್ಘಟನೆ ಸಂಭವಿಸಿದೆ. 
 

ದಿಲ್ಲಿ : ರೇಡಿಯೊ ಜಾಕಿಯೋರ್ವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ದಿಲ್ಲಿ - ಎನ್’ಸಿಆರ್ ಪ್ರದೇಶದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. 

ರೇಡಿಯೋ ಮಿರ್ಚಿಯಲ್ಲಿ ಆರ್ ಜೆ ಆಗಿದ್ದ ತನಿಯಾ ಖನ್ನಾ ಅವರು ಕಾರು ಚಲಾಯಿಸಿಕೊಂಡು ತೆರಳುತ್ತಿದ್ದರು. ಈ ವೇಳೆ  ನಿಯಂತ್ರಣ ಕಳೆದುಕೊಂಡ ಕಾರು ಕಾಲುವೆಗೆ ಉರುಳಿ ಬಿದ್ದಿದೆ. 

ಈ ವೇಳೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು,  ಕಾರಿನಲ್ಲಿದ್ದ ತನಿಯಾ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ತನಿಯಾ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿಯೇ ತನಿಯಾ ಮೃತಪಟ್ಟಿದ್ದು, ಈ ಬಗ್ಗೆ ವೈದ್ಯರು ದೃಢಪಡಿಸಿದರು.  

 

loader