ಬೆಂಗಳೂರು [ಜು.16] : ಕೇತುಗ್ರಸ್ಥ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಅನೇಕ ದೇಗುಲಗಳ ಪೂಜೆ, ದರ್ಶನ ಸಮಯ ಬದಲಾವಣೆ ಮಾಡಲಾಗಿದೆ. ಆದರೆ ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ. 

ಎಂದಿನಂತೆ ಧರ್ಮಸ್ಥಳ ಕ್ಷೇತ್ರದಲ್ಲಿ ಪೂಜಾ ಕಾರ್ಯಗಳು ನಡೆಯಲಿವೆ. ರಾತ್ರಿ 8.30ರವರೆಗೂ ಕೂಡ ಮಂಜುನಾಥನ  ದರ್ಶನ ಪಡೆಯಲು ಅವಕಾಶವಿದೆ. 

ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲಿ ಗ್ರಹಣ ಹಿನ್ನೆಲೆಯಲ್ಲಿ ಪೂಜಾ ಹಾಗೂ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಸಂಜೆ 6.30 ಕ್ಕೆ ಮಹಾ ಪೂಜೆ ಬಳಿಕ ಕುಕ್ಕೆ ಕ್ಷೇತ್ರದಲ್ಲಿ ಬಾಗಿಲು ಬಂದ್ ಆಗಲಿದೆ. ಪ್ರತಿನಿತ್ಯ  7 ಗಂಟೆಗೆ ದೇಗುಲದ ಬಾಗಿಲು ಮುಚ್ಚಲಾಗುತಿತ್ತು. ಆದರೆ ಗ್ರಹಣ ಹಿನ್ನೆಲೆ ಅರ್ಧ ಗಂಟೆ ಮೊದಲು ಬಂದ್ ಮಾಡಲಾಗುತ್ತಿದೆ. 

ಇನ್ನು ಕುಕ್ಕೆ ಕ್ಷೇತ್ರದಲ್ಲಿ ನಿತ್ಯ ನಡೆಯುವ ಆಶ್ಲೇಷ ಬಲಿ ಪೂಜೆ ಹಾಗೂ ಅನ್ನ ಸಂತರ್ಪಣೆಯನ್ನೂ ಗ್ರಹಣ ಹಿನ್ನೆಲೆ ಸ್ಥಗಿತವಾಗಿದೆ.