ಬೆಳಕಿನ ಹಬ್ಬ ದೀಪಾವಳಿಯೇನು ಮುಗೀತು. ಅದರ ಎಫೆಕ್ಟ್ ಈಗ ಬೆಂಗಳೂರಿಗೆ ತಟ್ಟಿದೆ. ಪಟಾಕಿ ಸಿಡಿತದಿಂದ ನಗರದಲ್ಲಿ ದಾಖಲೆ ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗಿದೆ. ಆ ಬಗ್ಗೆ ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಬೆಂಗಳೂರು(ಅ.22): 3 ದಿನದ ದೀಪಾವಳಿ ಹಬ್ಬದ ಸಂಭ್ರಮಾಚಾರಣೆ ಇಡೀ ಬೆಂಗಳೂರನ್ನು ಕಲುಷಿತಗೊಳಿಸಿದೆ. ಪಟಾಕಿ ಸಿಡಿತ ಸೇರಿದಂತೆ ಹಲವು ಕಾರಣಗಳಿಂದ ವಾಯುಮಾಲಿನ್ಯ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ.
ಎಲ್ಲೆಲ್ಲಿ ಅತಿ ಹೆಚ್ಚು ಮಾಲಿನ್ಯ ?
ರಾಜಾಜಿನಗರದ ಸಾಣಿಗುರುವನಹಳ್ಳಿಯಲ್ಲಿ ಅತಿ ಹೆಚ್ಚು 120.12 ಮೈ.ಗ್ರಾಂ ನಷ್ಟು ವಾಯು ಮಾಲಿನ್ಯ ಆಗಿರೋದು ದಾಖಲೆಯಾಗಿದೆ. ಉಳಿದಂತೆ ಕಾಡುಬೀಸನಹಳ್ಳಿ 95.06 ರಷ್ಟು ಹಾಗೂ ಬಿಟಿಎಂ ಲೇಔಟ್ ನಲ್ಲಿ 75.58 ರಷ್ಟು ವಾಯು ಮಾಲಿನ್ಯ ದಾಖಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿ ಪಡಿಸಿದ ಪ್ರಮಾಣಕ್ಕಿಂತಲೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.
ಹಬ್ಬಕ್ಕೂ ಮುನ್ನ ಸರ್ಕಾರ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪಟಾಕಿ ಹೊಡೆಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತ್ತು. ಆದರೆ ಇದು ವರ್ಕೌಟ್ ಆಗಿಲ್ಲ. ಈ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಲ್ಲಿ ಮಾತ್ರ ಪರಿಸ ಮಾಲಿನ್ಯ ತಡೆಗಟ್ಟಲು ಸಾಧ್ಯ.
