ಕಳೆದ ಬಾರಿ ಪ್ರಾದೇಶಿಕ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಇವರು, ಈ ಬಾರಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಪೈಪೋಟಿ ತೀವ್ರಗೊಂಡಿದ್ದು, ಜಿಲ್ಲೆಯ ರಾಜಕಾರಣಿಯೊಬ್ಬರು ಚುನಾವಣೆಗಾಗಿಯೇ ತಮ್ಮ 100 ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಭರವಸೆಗಳ ಜೊತೆಗೆ ‘ಕನಕ’ವೃಷ್ಟಿಯನ್ನೇ ಹರಿಸಲಾಗುತ್ತಿದೆ. ಚುನಾವಣೆ ದಿನ ಇನ್ನೂ ಘೋಷಣೆಯಾಗದಿದ್ದರೂ ಶಾಸಕ‘ಗಿರಿ’ಗಾಗಿ ಭಾರಿ ಕಸರತ್ತು ನಡೆದಿದೆ. ಹೀಗಾಗಿ, ಚುನಾವಣೆಗೆ ಈ ರಾಜಕಾರಣಿ ತಮ್ಮ 100 ಎಕರೆ ಜಮೀನನ್ನು ಎಕರೆಗೆ ತಲಾ 6-15 ಲಕ್ಷ ರು.ನಂತೆ ಮಾರಾಟ ಮಾಡಿದ್ದಾರೆ. ಈ ಮೊತ್ತವೇ 12-15 ಕೋಟಿ ಆಗುತ್ತದೆ. ಈಗಾಗಲೇ 100 ಎಕರೆ ಜಮೀನು ಮಾರಾಟದ ವ್ಯವಹಾರ ಕುದುರಿದ್ದು, ಚುನಾವಣೆ ವೇಳೆ ಈ ಹಣವನ್ನು ಭೂಮಿ ಖರೀದಿಸಿರುವವರು ನೀಡಬೇಕೆಂಬ ಷರತ್ತು ಆಗಿದೆ.

ಈ ಹಣವನ್ನು ಚುನಾವಣೆ ವೇಳೆ ವೆಚ್ಚ ಮಾಡಲು ಆ ರಾಜಕಾರಣಿ ಸಜ್ಜಾಗಿದ್ದಾರೆ. ಈ ವಿಚಾರವೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಚುನಾವಣೆಗೂ ಪೂರ್ವದಲ್ಲಿಯೇ ಆಸ್ತಿ ಮಾರಿರುವುದು ಅಚ್ಚರಿಗೆ ಕಾರಣವಾಗಿದೆ. ಕಳೆದ ಬಾರಿ ಪ್ರಾದೇಶಿಕ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಇವರು, ಈ ಬಾರಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಹಿಂದೆ ಇವರಿದ್ದ ಪ್ರಾದೇಶಿಕ ಪಕ್ಷವೂ ಅದೇ ರಾಷ್ಟ್ರೀಯ ಪಕ್ಷದಲ್ಲಿ ವಿಲೀನವಾಗಿರುವುದರಿಂದ ಇವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ. ಈ ಬಗ್ಗೆ ಬಹಿರಂಗ ವೇದಿಕೆಯಲ್ಲೇ ಘೋಷಣೆಯೂ ಆಗಿದೆ. ಹೀಗಾಗಿ, ಏನಾದರೂ ಆಗಲಿ ಈ ಬಾರಿ ಗೆಲ್ಲಲೇಬೇಕು ಎಂದು ಈಗಲೇ ಜಮೀನು ಮಾರಿದ್ದಾರೆ. ಈ 100 ಎಕರೆ ಜಮೀನಿನಲ್ಲಿ 70 ಎಕರೆ ಸ್ವಂತದ್ದಾಗಿದ್ದರೆ, ಉಳಿದ ಜಮೀನುಗಳು ಸಂಬಂಧಿಕರು, ಸ್ನೇಹಿತರಿಗೆ ಸೇರಿದವಾಗಿವೆ. ಕೊಪ್ಪಳದ ನೆರೆಯ ಜಿಲ್ಲೆಯವರೇ ಆಗಿರುವ ಅಭ್ಯರ್ಥಿಗೆ ಅಲ್ಲಿಯೇ ಈ ಆಸ್ತಿ ಇತ್ತು ಎನ್ನಲಾಗಿದೆ.

ಕುದುರೆ ವ್ಯಾಪಾರ: ಕೆಲವು ಮೂಲಗಳ ಪ್ರಕಾರ, ಈ ಕ್ಷೇತ್ರದಲ್ಲಿ ಹರಿಯುತ್ತಿರುವಷ್ಟು ಹಣದ ಹೊಳೆ ಜಿಲ್ಲೆಯ ಯಾವ ಕ್ಷೇತ್ರದಲ್ಲೂ ಹರಿದಾಡುತ್ತಿಲ್ಲ ಎನ್ನಲಾಗಿದ್ದು, ಈಗ ತಾವು ಜಮೀನು ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ಯುವಕರು ಹಾಗೂ ಮುಂಚೂಣಿ ಮುಖಂಡರನ್ನು ಖರೀದಿಸುವ ಕುದುರೆ ವ್ಯಾಪಾರವನ್ನೂ ಜೋರಾಗಿಯೇ ನಡೆಸಿದ್ದಾರೆ. ಜೊತೆಗೆ ಕ್ಷೇತ್ರದ ಹಲವಾರು ಅಭಿವೃದ್ಧಿ

- ಸೋಮರಡ್ಡಿ ಅಳವಂಡಿ, ಕೊಪ್ಪಳ