ರಾಜ್ಯ ರಾಜಕಾರಣದ ಬೃಹನ್ನಾಟಕದಿಂದ ಬೇಸತ್ತವರೊಬ್ಬರು ಸೋಶಿಯಲ್  ಮೀಡಿಯಾದಲ್ಲಿ ಈ ಎಲ್ಲ ಗೊಂದಲಗಳನ್ನು ಹೇಗೆ ನಿವಾರಿಸಬಹುದು ಎಂದು ಸಲಹೆ ನೀಡಿದ್ದಾರೆ. ಸಲಹೆ ಬಾರಿ ಮಜವಾಗಿದೆ.

ಇದನ್ನು ಸುದ್ದಿ ಎಂದು ಅಂದುಕೊಂಡು ಖಂಡಿತ ಓದಲೇಬೇಡಿ.. ಜಸ್ಟ್ ಫಾರ್ ಫನ್.. ಕಾನೂನಿನಲ್ಲಿ ಇದೆಲ್ಲದಕ್ಕೆ ಅವಕಾಶ ಇದೆಯೋ? ಸಂವಿಧಾನ ಏನು ಹೇಳುತ್ತದೆ ಎಂಬೆಲ್ಲ ವಿಚಾರಗಳನ್ನು ಮೊದಲಿಗೆ ಬದಿಗಿಡಿ.. ಇದನ್ನು ಓದಿ ಎಂಜಾಯ್ ಮಾಡಿ....

ಹೀಗೆ ಮಾಡಿಬಿಡಿ... ಆಗ ಯಾವ ತೊಂದರೆಯೂ ಎದುರಾಗುವುದೇ ಇಲ್ಲ. ಯಾವ ಶಾಸಕರು ಪಕ್ಷ ಬಿಟ್ಟು ಹೋಗುವುದೇ ಇಲ್ಲ ಎಂಬ ಸಲಹೆ ಸಿಕ್ಕಿದೆ.

ಭೇಟಿಯಾಗಲು ಹೋದ ರಾಜ್ಯ ನಾಯಕರಿಗೆ ಶಾ ಬುದ್ಧಿವಾದ

ಮೂರೂ ಪಕ್ಷದವರು ಸೇರಿಯೇ ಸರ್ಕಾರ ರಚಿಸಿಬಿಡಿ. ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ಕೊಟ್ಟುಬಿಡಿ. ಚಿಂತೆ ಬೇಡ, ಅದಕ್ಕಾಗಿ ಹೊಸದಾಗಿ ಬೇಕಾದಷ್ಟು ಖಾತೆ ಸೃಷ್ಟಿಸಿದರಾಯಿತು. ಇರುವ ಖಾತೆಗಳನ್ನೇ ಹೀಗೆ ವಿಭಜಿಸಿ... ಕೃಷಿ ಖಾತೆಯನ್ನು ಭತ್ತ ಸಚಿವ, ರಾಗಿ ಸಚಿವ, ಜೋಳ ಸಚಿವ, ಬೇಳೆ ಸಚಿವ, ಕುಂಬಳಕಾಯಿ ಸಚಿವ, ನಿಂಬೆ ಸಚಿವ.... ಹೀಗೆ. 

ಕೈಗಾರಿಕೆಯನ್ನು ದೊಡ್ಡ ಕೈಗಾರಿಕೆ, ಸಣ್ಣ ಕೈಗಾರಿಕೆ, ಅತಿ ಸಣ್ಣ ಕೈಗಾರಿಕೆ, ಕಂಡಾಪಟ್ಟೆ ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ, ಚರ್ಚ್ ಕೈಗಾರಿಕೆ, ಮಸೀದಿ ಕೈಗಾರಿಕೆ.... 

ಪಶು ಸಂಗೋಪನೆಯನ್ನು ದನ ಸಚಿವ, ಎಮ್ಮೆ ಸಚಿವ, ಕುದುರೆ ಸಚಿವ, ಕೋಳಿ ಸಚಿವ,ಹಂದಿ ಸಚಿವ,ನಾಯಿ ಸಚಿವ.... 

ಶಿಕ್ಷಣವನ್ನು ಏಳನೇ ಕ್ಲಾಸ್ ಸಚಿವ, ಆರನೇ ಕ್ಲಾಸ್ ಸಚಿವ..... ಮೂರನೇ ಕ್ಲಾಸ್ ಸಚಿವ (ಥರ್ಡ್ ಕ್ಲಾಸ್ ಅಲ್ಲ)..... ವಿದ್ಯಾರ್ಹತೆಗೆ ಅನುಗುಣವಾಗಿಯೂ ಕೊಡಬಹುದು. 

ಆರೋಗ್ಯ ಖಾತೆಯನ್ನು ಕ್ಯಾನ್ಸರ್ ಸಚಿವ, ಮಧುಮೇಹ ಸಚಿವ,ಹುಚ್ಚರ ಸಚಿವ, ಗ್ಯಾಸ್ಟ್ರಿಕ್ ಸಚಿವ..... 

ಕ್ರೀಡಾ ಇಲಾಖೆಯಲ್ಲಿ ಕಬಡ್ಡಿ ಸಚಿವ, ಕ್ರಿಕೆಟ್ ಸಚಿವ, ಲಾಂಗ್ ಜಂಪ್ ಸಚಿವ, ಗೋಲಿ ಯಂಡ್ ಚಿನ್ನಿ ದಾಂಡ್ ಸಚಿವ.... 

ನೀರಾವರಿಯನ್ನು ದೊಡ್ಡ ನೀರಾವರಿ, ಸಣ್ಣ ನೀರಾವರಿ, ಕೊಳಚೆ ನೀರಾವರಿ ಸಚಿವ.... 

ಹೀಗೆ ಮಾಡಿದಾಗ ಭಿನ್ನಮತ ಎಲ್ಲಿಯೂ ಇರದುದು? ವಿರೋಧ ಪಕ್ಷ ವೂ ಇಲ್ಲವಾಗಿ ವಿಧಾನ ಸೌಧದಲ್ಲಿ ಶಾಂತಿಯೂ ನೆಲೆಸಿ ವಾನರ ಸೇನಾ ಸಮೇತ ರಾಮ ರಾಜ್ಯ ನಿರ್ಮಾಣ ಆಗುತ್ತದೆ.. ಏನಂತೀರಿ!