ಬೆಂಗಳೂರು (ಮಾ. 03):  ಆರೋಗ್ಯ ಇಲಾಖೆ ರಾಜ್ಯಾದ್ಯಂತ ಮಾ.10 ರಂದು ರಾಷ್ಟ್ರೀಯ ಪೋಲಿಯೊ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಮನವಿ ಮಾಡಿದೆ. 

ಪೋಲಿಯೊ ಸೋಂಕು ಮಕ್ಕಳಲ್ಲಿ ತೀವ್ರತರವಾದ ಅಸ್ವಸ್ಥತೆ ಹಾಗೂ ಅಂಗವೈಕಲ್ಯ ಉಂಟುಮಾಡುತ್ತದೆ. ಇದು ಕೆಲವು ಸಂದರ್ಭದಲ್ಲಿ ಸಾವಿಗೂ ಕಾರಣವಾಗಬಹುದು. 

1980ರ ದಶಕದಲ್ಲಿ ವಿಶ್ವದಲ್ಲಿ ಪ್ರತಿ ವರ್ಷ 3 ಲಕ್ಷ ಮಕ್ಕಳು ಪೋಲಿಯೋ ಸೋಂಕಿನಿಂದ ಪಾಶ್ರ್ವವಾಯುವಿಗೆ ತುತ್ತಾಗುತ್ತಿದ್ದರು. ಭಾರತದಲ್ಲಿ ಪೋಲಿಯೊ ಲಸಿಕಾ ಕಾರ್ಯಕ್ರಮದ ಸಮರ್ಪಕ ಅನುಷ್ಠಾನದಿಂದ ಕಳೆದ 7 ವರ್ಷಗಳಿಂದ ಇಂತಹ ಯಾವುದೇ ಪ್ರಕರಣ ವರದಿಯಾಗಿಲ್ಲ. ಹೀಗಾಗಿ ಭಾರತವು ಪೋಲಿಯೊ ಮುಕ್ತ ಎಂದು ಘೋಷಿಸಲ್ಪಟ್ಟಿದೆ.

ಈ ಕಾರ್ಯಕ್ರಮದ ಅಂಗವಾಗಿ 2019ರಲ್ಲಿ ಮಾ.10ರಂದು (ಒಂದು ಸುತ್ತು ಮಾತ್ರ) ಪೋಲಿಯೊ ಲಸಿಕೆ ಹಾಕಲಾಗುವುದು. ಹೀಗಾಗಿ 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಹನಿ ಹಾಕಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.

2018ರಲ್ಲಿ ಆಷ್ಘಾನಿಸ್ತಾನದಲ್ಲಿ 21 ಹಾಗೂ ಪಾಕಿಸ್ತಾನದಲ್ಲಿ 9 ಪೋಲಿಯೋ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ನಮ್ಮ ದೇಶದ ಮಕ್ಕಳು ಇನ್ನೂ ಅಪಾಯದಲ್ಲೇ ಇದ್ದಾರೆ. ನೆರೆಯ ದೇಶಗಳ ಮೂಲಕ ಭಾರತಕ್ಕೆ ಪೋಲಿಯೊ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ದೃಷ್ಟಿಯಿಂದ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಮುಂದುವರೆಸಲಾಗಿದೆ. ಪ್ರತಿ ಶಿಶುವಿಗೆ 5 ವರ್ಷ ವಯಸ್ಸಾಗುವುದರ ಒಳಗಾಗಿ 5 ವರಸೆ ಒಪಿವಿ ಮತ್ತು 2 ವರಸೆ ಐಪಿವಿ ಲಸಿಕೆಯನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ನೀಡಲಾಗುತ್ತಿದೆ.

ಈ ಕಾರ್ಯಕ್ರಮದ ಅಂಗವಾಗಿ 2019ರಲ್ಲಿ ಮಾ.10ರಂದು (ಒಂದು ಸುತ್ತು ಮಾತ್ರ) ಪೋಲಿಯೊ ಲಸಿಕೆ ಹಾಕಲಾಗುವುದು. ಹೀಗಾಗಿ 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಹನಿ ಹಾಕಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.