ಮೋದಿಯವರ ಅಭಿವೃದ್ಧಿಯಿಂದ ಪ್ರತಿಯೊಬ್ಬರು ವೃದ್ಧಿ

Policies of Modi govt have reached poor, women and farmers without any discrimination
Highlights

ಪ್ರಧಾನಿಯವರ ನಾಯಕತ್ವದಲ್ಲಿ ಭಾರತ ವಿಶ್ವದ ಶಕ್ತಿಯಾಗಿ ಪ್ರಜ್ವಲಿಸಲಿದೆ. ದೇಶದ ಜನತೆ ಬಿಜೆಪಿ ಪಕ್ಷದ ಮೇಲೆ ನಂಬಿಕೆಯಿಟ್ಟು ಅಭಿವೃದ್ಧಿಗಾಗಿ ಮುಂದಿನ ಬಾರಿ ಮೋದಿಯವರನ್ನು ಚುನಾಯಿಸುವುದು ಖಂಡಿತಾ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಖನೌ[ಮೇ.26]: ಪ್ರದಾನಿ ನರೇಂದ್ರ ಮೋದಿಯವರು ಯಾವುದೇ ತಾರತಮ್ಯ ಮಾಡದೆ ದೇಶದ ಪ್ರತಿಯೊಬ್ಬ ಪ್ರಜೆಗೂ ಅನುಕೂಲ ಕಲ್ಪಿಸಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಸುದ್ದಿಮಾಧ್ಯದೊಂದಿಗೆ ಮಾತನಾಡಿದ ಅವರು, ಮೋದಿ ಸರ್ಕಾರ 4 ವರ್ಷ ಪೂರೈಸಿದ್ದಕ್ಕೆ ಪ್ರಧಾನಿ ಮಂತ್ರಿ ಹಾಗೂ ಅವರ ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಅವರು ರೂಪಿಸಿದ ಯೊಜನೆಗಳು  ಯಾವುದೇ ತಾರತಮ್ಯ ಜಾತಿಯತೆ ತೋರದೆ ದೇಶದ ಕಟ್ಟಕಡೆಯ ನಾಗರಿಕನಿಗೂ ಅನುಕೂಲ ಕಲ್ಪಿಸಿದ್ದಾರೆ ಎಂದು ಪ್ರಧಾನಿಯವರನ್ನಿ ಶ್ಲಾಘಿಸಿದರು.
ಪ್ರಧಾನಿಯವರ ನಾಯಕತ್ವದಲ್ಲಿ ಭಾರತ ವಿಶ್ವದ ಶಕ್ತಿಯಾಗಿ ಪ್ರಜ್ವಲಿಸಲಿದೆ. ದೇಶದ ಜನತೆ ಬಿಜೆಪಿ ಪಕ್ಷದ ಮೇಲೆ ನಂಬಿಕೆಯಿಟ್ಟು ಅಭಿವೃದ್ಧಿಗಾಗಿ ಮುಂದಿನ ಬಾರಿ ಮೋದಿಯವರನ್ನು ಚುನಾಯಿಸುವುದು ಖಂಡಿತಾ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಡೆದು ಆಳುವ ನೀತಿಗೆ ಮತ್ತೆ ಪಾಠ
ಒಡೆದು ಆಳುವ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ 2014ರಲ್ಲಿ ಕಲಿಸಿದ ಪಾಠವನ್ನೆ ಪ್ರಜ್ಞಾವಂತ ನಾಗರಿಕರು  ಮತ್ತೊಮ್ಮೆ ಕಲಿಸಲಿದ್ದಾರೆ. 2014ರ ಚುನಾವಣಾ ಪೂರ್ವ ಸಂದರ್ಭದಲ್ಲಿ ಮೋದಿಯವರು ಭ್ರಷ್ಟಾಚಾರದಲ್ಲಿ ನಿರತರಾಗಿರುವ ಯುಪಿಎ ಆಡಳಿತವನ್ನು ಕಿತ್ತೊಗೆಯುವಂತೆ ಮತದಾರರಲ್ಲಿ ಮನವಿ ಮಾಡಿ ಯಶಸ್ವಿಯು ಆದರು.

loader