ಜಾರ್ಖಂಡ್'ನಲ್ಲಿ ಅಟ್ಟಹಾಸ ಮೆರೆದ ನಕ್ಸಲೀಯರು| ನಕ್ಸಲ್ ದಾಳಿಗೆ ಐವರು ಪೊಲೀಸರು ಹುತಾತ್ಮ| ಸರೈಕೆಲಾ ಜಿಲ್ಲೆಯಲ್ಲಿ ಏಕಾಏಕಿ ದಾಳಿ ನಡೆಸಿದ ನಕ್ಸಲೀಯರು| ದಾಳಿ ನಡೆಸಿದ ನಕ್ಸಲೀಯರಿಗಾಗಿ ತೀವ್ರ ಶೋಧ| ಘಟನೆಯನ್ನು ತೀವ್ರವಾಗಿ ಖಂಡಿಸಿದ ಸಿಎಂ ರಘುಬರ್ ದಾಸ್|
ಜಮ್'ಶೇಡ್'ಪುರ್(ಜೂ.14): ನಕ್ಸಲೀಯರು ನಡೆಸಿದ ದಾಳಿಯಲ್ಲಿ ಕನಿಷ್ಠ 5 ಪೊಲೀಸರು ಹುತಾತ್ಮರಾಗಿರುವ ಘಟನೆ ಜಾರ್ಖಂಡ್'ನ ಸರೈಕೆಲಾ ನಡೆದಿದೆ.
ಇಲ್ಲಿನ ಸರೈಕೆಲಾ ಜಿಲ್ಲೆಯಲ್ಲಿ ಕೂಂಬಿಂಗ್ ನಡೆಸುತ್ತಿದ್ದ ಪೊಲೀಸರ ಮೇಲೆ ಏಕಾಏಕಿ ದಾಳಿ ನಡೆಸಿದ ನಕ್ಸಲೀಯರು, ಐವರು ಪೊಲೀಸರನ್ನು ಬಲಿ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪ.ಬಂಗಾಳ ಗಡಿಯಲ್ಲಿ ಘಟನೆ ನಡೆದಿದ್ದು, ದಾಳಿ ನಡೆಸಿರುವ ನಕ್ಸಲೀಯರು ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನು ಸುತ್ತಲಿನ ಸ್ಥಳವನ್ನು ಸುತ್ತುವರೆದಿರುವ ಪೊಲೀಸರು ನಕ್ಸಲೀಯರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಇನ್ನು ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಿಎಂ ರಘುಬರ್ ದಾಸ್, ಹುತಾತ್ಮ ಪೊಲೀಸರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
