ಆ್ಯಂಬುಲೆನ್ಸ್‌’ನಲ್ಲಿ ಗರ್ಭಿಣಿ ಮಹಿಳೆ ನೋವಿನಿಂದ ನರಳಾಡುತ್ತಿದ್ದು, ಪೊಲೀಸರ ಕ್ರಮದಿಂದ  ಅರ್ಧ ಗಂಟೆಗೂ ಹೆಚ್ಚು  ರಸ್ತೆಯಲ್ಲೇ ಕಳೆಯಬೇಕಾಯಿತು.

ಹಾವೇರಿ: ಹಾವೇರಿಗೆ ಬಂದಿದ್ದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸುಗಮ ಸಂಚಾರಕ್ಕಾಗಿ ಆ್ಯಂಬುಲೆನ್ಸನ್ನು ತಡೆದು ನಿಲ್ಲಿಸಿದ ಘಟನೆ ನಡೆದಿದೆ.

ಆ್ಯಂಬುಲೆನ್ಸ್‌’ನಲ್ಲಿ ಗರ್ಭಿಣಿ ಮಹಿಳೆ ನೋವಿನಿಂದ ನರಳಾಡುತ್ತಿದ್ದು, ಪೊಲೀಸರ ಕ್ರಮದಿಂದ ಅರ್ಧ ಗಂಟೆಗೂ ಹೆಚ್ಚು ರಸ್ತೆಯಲ್ಲೇ ಕಳೆಯಬೇಕಾಯಿತು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್​ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುಜರಾತ್​ ಸಿಎಂ ಹಾವೇರಿಗೆ ಬಂದಿದ್ದರು. ಅದೇ ವೇಳೆ ಗರ್ಭಿಣಿ ಮಹಿಳೆಯನ್ನು ಕರ್ಜಗಿಯಿಂದ ಹಾವೇರಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗುತ್ತಿತ್ತು.