ಸಿಎಂ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡನನ್ನು ವೇದಿಕೆಯಿಂದ ಹೊರದಬ್ಬಿದ ಪೊಲೀಸರು

First Published 10, Jan 2018, 4:59 PM IST
Police Push up BJP Leader at CM Stage
Highlights

ಚಾಮರಾಜನಗರದಲ್ಲಿ ಸರ್ಕಾರದ ವತಿಯಿಂದ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ವೇದಿಕೆಯಲ್ಲಿ ಸಚಿವರು, ಶಾಸಕರು ಸೇರಿದಂತೆ ಸ್ಥಳೀಯ ರಾಜಕೀಯ ನಾಯಕರು ಆಸೀನರಾಗಿದ್ದರು.

ಚಾಮರಾಜನಗರ(ಜ.10): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಟೀಕಿಸುವ ಸಂದರ್ಭದಲ್ಲಿ ಬಿಜೆಪಿ ಮುಖಂಡನೊಬ್ಬ ಆಕ್ಷೇಪ ವ್ಯಕ್ತಪಡಿಸಿದಾಗ ಆ ವ್ಯಕ್ತಿಯನ್ನು ವೇದಿಕೆಯಿಂದ ಪೊಲೀಸರು ಹೊರದಬ್ಬಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರದಲ್ಲಿ ಸರ್ಕಾರದ ವತಿಯಿಂದ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ವೇದಿಕೆಯಲ್ಲಿ ಸಚಿವರು, ಶಾಸಕರು ಸೇರಿದಂತೆ ಸ್ಥಳೀಯ ರಾಜಕೀಯ ನಾಯಕರು ಆಸೀನರಾಗಿದ್ದರು. ಇವರಲ್ಲಿ ಚಾಮರಾಜನಗರ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ದಯಾನಿಧಿ ಕೂಡ ಇದ್ದರು. ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವಾಗ ಬಿಜೆಪಿ ಹಾಗೂ ಯಡಿಯೂರಪ್ಪ ಅವರನ್ನು ಟಿಕಿಸಿದ್ದಾರೆ.

ಇದಕ್ಕೆ ದಯಾನಿಧಿ ಅವರು ವೇದಿಕೆಯಿಂದಲೇ ಆಕ್ಷೇಪ ವ್ಯಕ್ತಪಡಿಸಿದರು. ಮಧ್ಯಪ್ರವೇಶಿಸಿದ ಪೊಲೀಸರು ವೇದಿಕೆಯಿಂದ ಹೊರದಬ್ಬಿದರು.

loader