ಬೆಂಗಳೂರು ಹೊರವಲಯದ ಬ್ಯಾಡರಹಳ್ಳಿಯ ಬ್ರಹ್ಮದೇವರ ಗುಡ್ಡೆಯಲ್ಲಿ ಪೊಲೀಸರ ಗನ್ ಸದ್ದು ಮಾಡಿದೆ.
ಬೆಂಗಳೂರು, [ಸೆ.28]: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ಬೆಂಗಳೂರು ಹೊರವಲಯದ ಬ್ಯಾಡರಹಳ್ಳಿಯ ಬ್ರಹ್ಮದೇವರ ಗುಡ್ಡೆಯಲ್ಲಿ ಪೊಲೀಸರ ಗನ್ ಸದ್ದು ಮಾಡಿದೆ.
ನಿನ್ನೆ [ಬುಧವಾರ] ಸುರೇಶ ಎಂಬಾತ ದಿನೇಶ್ ಎನ್ನುವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದ. ಇಂದು ಸುರೇಶನನ್ನು ಬಂಧಿಸಲು ಹೋಗಿದ್ದ ಬ್ಯಾಡರಹಳ್ಳಿ ಹೆಡ್ ಕಾನ್ಸ್ ಟೇಬಲ್ ಜ್ಯೋತಿಪ್ರಕಾಶ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಇದ್ರಿಂದ ಆತ್ಮ ರಕ್ಷಣೆಗಾಗಿ ಬ್ಯಾಡರಹಳ್ಳಿ ಇನ್ಸ್ ಪೆಕ್ಟರ್ ಸತ್ಯನಾರಾಯಣ ಅವರು ಆರೋಪಿ ಸುರೇಶ್ ಮೇಲೆ ಫೖರಿಂಗ್ ಮಾಡಿದ್ದಾರೆ. ಆರೋಪಿ ಸುರೇಶ್ ಅಲಿಯಾಸ್ ಕಳ್ಳಿಪಳ್ಳಿ ಕುಣಿಗಲ್ ಮೂಲದವನು ಎಂದು ತಿಳಿದುಬಂದಿದೆ.
