ಬೆಂಗಳೂರಿನ ಮೋಸ್ಟ್ ವಾಂಟೆಡ್ ಸರಗಳ್ಳ ಅರೆಸ್ಟ್

First Published 19, Jun 2018, 7:36 AM IST
Police open fire at chain snatcher arrest him
Highlights

ಬೆಂಗಳೂರು ಪೊಲೀಸರಿಗೆ ತಲೆನೋವಾಗಿದ್ದ ಹಾಗೂ ಪೊಲೀಸರ ವಶದಲ್ಲಿದ್ದಾಗಲೇ ಪರಾರಿಯಾಗಿದ್ದ ಈ ಕುಖ್ಯಾತ ಒಂಟಿ ಸರಗಳ್ಳನ ಮೇಲೆ ಗುಂಡು ಹಾರಿಸಿ ಬಂಧಿಸುವಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರು : ಈತ ಅಂತಿಂಥ ಸರಗಳ್ಳನಲ್ಲ. ಇದುವರೆಗೆ ನೂರಾರು ಬಾರಿ ಸರಗಳ್ಳತನ ಎಸಗಿದ್ದಾನೆ. ಅದೂ ಏಕಾಂಗಿಯಾಗಿ. ಬಂದ ಹಣದಲ್ಲಿ ಐಷಾರಾಮಿ ಜೀವನ ಮಾಡುತ್ತಿದ್ದ. ಕಾರು, ಬೈಕ್‌ಗಳನ್ನು ಹೊಂದಿದ್ದ. ಮನೆಯ ಬಳಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವುದಾಗಿ ಬೋರ್ಡನ್ನೂ ನೇತುಹಾಕಿದ್ದ.

ಬೆಂಗಳೂರು ಪೊಲೀಸರಿಗೆ ತಲೆನೋವಾಗಿದ್ದ ಹಾಗೂ ಪೊಲೀಸರ ವಶದಲ್ಲಿದ್ದಾಗಲೇ ಪರಾರಿಯಾಗಿದ್ದ ಈ ಕುಖ್ಯಾತ ಒಂಟಿ ಸರಗಳ್ಳನ ಮೇಲೆ ಗುಂಡು ಹಾರಿಸಿ ಬಂಧಿಸುವಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಈತ ಕುಂಬಳಗೂಡು ಸಮೀಪದ ಕಣಮಿಣಕೆ ಗ್ರಾಮದ ನಿವಾಸಿ ಅಚ್ಯುತಕುಮಾರ್ ಗಣಿ (31 ).

ಘಟನೆಯಲ್ಲಿ ಆರೋಪಿಯಿಂದ ಚಾಕು ಇರಿತಕ್ಕೆ ಒಳಗಾಗಿರುವ ಜ್ಞಾನಭಾರತಿ ಠಾಣೆ ಕಾನ್ಸ್‌ಟೇಬಲ್ ಚಂದ್ರಕುಮಾರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡೇಟು ತಿಂದ ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು
ಹೇಳಿದ್ದಾರೆ.  

loader