ಸಾಮಾನ್ಯವಾಗಿ ಜನರಿಗೆ ಏನೇ ಸಮಸ್ಯೆ ಬಂದರೂ ಪೋಲಿಸರು ತಮಗೆ ನ್ಯಾಯ ಒದಗಿಸುತ್ತಾರೆ ಎಂದು ಪೋಲಿಸ್ ಠಾಣೆ ಮೆಟ್ಟಿಲು ಏರುವುದು ಸಹಜ. ಆದರೆ ದೂರು ನೀಡಲು ಹೋದ ವ್ಯಕ್ತಿಗಳ ಮೇಲೆಯೇ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಮಡಿಕೇರಿಯಲ್ಲಿ ಕೇಳಿ ಬಂದಿದೆ. ಅಲ್ಲದೇ ಇನ್ಸ್​​​ಪೆಕ್ಟರ್​​​ ವಿರುದ್ಧ ಪೋಲಿಸ್ ವರಿಷ್ಟಾಧಿಕಾರಿಗೆ ದೂರು ನೀಡಲಾಗಿದೆ. ಮಡಿಕೇರಿ ತಾಲ್ಲೂಕು ನಾಪೋಕ್ಲು ಪೋಲಿಸ್ ಠಾಣೆಯ ಸಬ್'ಇನ್ಸ್​​​​ಪೆಕ್ಟರ್​​ ವೆಂಕಟೇಶ್ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಮಡಿಕೇರಿ(ನ.30): ಸಾಮಾನ್ಯವಾಗಿ ಜನರಿಗೆ ಏನೇ ಸಮಸ್ಯೆ ಬಂದರೂ ಪೋಲಿಸರು ತಮಗೆ ನ್ಯಾಯ ಒದಗಿಸುತ್ತಾರೆ ಎಂದು ಪೋಲಿಸ್ ಠಾಣೆ ಮೆಟ್ಟಿಲು ಏರುವುದು ಸಹಜ. ಆದರೆ ದೂರು ನೀಡಲು ಹೋದ ವ್ಯಕ್ತಿಗಳ ಮೇಲೆಯೇ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಮಡಿಕೇರಿಯಲ್ಲಿ ಕೇಳಿ ಬಂದಿದೆ. ಅಲ್ಲದೇ ಇನ್ಸ್​​​ಪೆಕ್ಟರ್​​​ ವಿರುದ್ಧ ಪೋಲಿಸ್ ವರಿಷ್ಟಾಧಿಕಾರಿಗೆ ದೂರು ನೀಡಲಾಗಿದೆ. ಮಡಿಕೇರಿ ತಾಲ್ಲೂಕು ನಾಪೋಕ್ಲು ಪೋಲಿಸ್ ಠಾಣೆಯ ಸಬ್'ಇನ್ಸ್​​​​ಪೆಕ್ಟರ್​​ ವೆಂಕಟೇಶ್ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಇತ್ತೀಚೆಗೆ ಕಾವೇರಿ ನದಿ ದಡದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದನ್ನು ತಡೆಗಟ್ಟಿ ಎಂದು ಸ್ಥಳೀಯರು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ದೂರು ನೀಡಿದ್ದ ಮೋಯ್ದು ಎಂಬುವವರಿಗೆ ಇನ್ಸ್​​​​ಪೆಕ್ಟರ್​​ ಧಮ್ಕಿ ಹಾಕಿದ್ದಾರಂತೆ. ಒಬ್ಬಂಟಿಯಾಗಿ ಸಿಕ್ಕಿದರೆ ಕಥೆ ಮುಗಿಸಿ ಬಿಡುವುದಾಗಿ ಮೋಯ್ದು ಸಂಬಂಧಿಕರ ಬಳಿ ಹೇಳಿರುವ ಸಂಭಾಷಣೆ ಮೊಬೈಲ್ ನಲ್ಲಿ ರೆಕಾರ್ಡ್​ ಆಗಿದೆ.

ಅಂದಹಾಗೆ ಇನ್ಸ್​​​ಪೆಕ್ಟರ್​​ ವೆಂಕಟೇಶ್ ಗೆ ಹಣ ನೀಡದೆ ಯಾವುದೇ ಕೆಲಸಗಳು ನಡೆಯುವುದಿಲ್ಲ ಮತ್ತು ದೂರು ನೀಡಲು ಬಂದವರಿಗೆ ನಿಂದಿಸುತ್ತಾರೆ ಎನ್ನುವ ಆರೋಪವೂ ಇದೆ.