ವಿದೇಶದಲ್ಲಿ ಕೆಲಸ ಖಾಲಿ ಇದೆ, ಸೂಪರ್ವೈಸರ್ ಕೆಲಸ ಇದೆ. ಪ್ರತೀ ತಿಂಗಳು ಲಕ್ಷ ಲಕ್ಷ ಹಣ ಗಳಿಸಬಹುದು ಎನ್ನುವ ಹಲವು ಟೋಪಿ ಜಾಹೀರಾತು ನೀವು ನೋಡಿರುತ್ತೀರಾ. ಇಂತಹುದೇ ಒಂದು ಸ್ಕೀಂ ಮಾಡಿ ಬೆಂಗಳೂರಿನ ಆನೆಕಲ್'ನ ಆರೋಪಿ ಅಜಯ್ ಕುಮಾರ್ ಎಂಬಾತ 75 ಲಕ್ಷ ವಂಚಿಸಿದ್ದಾನೆ. ಕೆಜಿಎಫ್'ನ ಸುಮಾರು 49 ಜನರಿಂದ ತಲಾ ಒಂದುವರೆ ಲಕ್ಷದಂತೆ ಟ್ರಾವೆಲ್ಸ್ ಮಾಲೀಕನಿಂದ ಪಡೆದು ಪರಾರಿಯಾಗಿದ್ದಾನೆ. ಅಜಯ್'ಗಾಗಿ 5 ತಿಂಗಳಿಂದ ಹುಡುಕಿದರೂ ಸುಳಿವು ಸಿಕ್ಕಿರಲಿಲ್ಲ. ಬಳಿಕ ಗೋವಾದಲ್ಲಿರುವುದು ದೃಡಪಟ್ಟಿತ್ತು. ಆದರಂತೆ ಪೊಲೀಸರ ಟೀಂ ಜೊತೆ ಜಂಬು ಪೊಲೀಸರು ಜೊತೆ ಹೋಗಿ ಅಜಯ್ ಮನೆಗೆ ದಾಳಿ ಮಾಡಲು ಪ್ಲಾನ್ ಮಾಡಿಕೊಂಡಿದ್ದರು. ಆದರೆ ದಾಳಿಗೂ ಮುನ್ನ ಪೊಲೀಸ್ ತಂಡದಲ್ಲಿದ್ದ ಹೆಡ್ ಕಾನ್ಸ್'ಟೇಬಲ್ ಗೋಪಾಲ್ ಸಿಂಗ್ ತನ್ನ ಗೆಳೆಯರ ಜೊತೆ ಅರೋಪಿ ಮನೆಗೆ ಹೋಗಿ ಅರೋಪಿಯಿಂದ ಚಿನ್ನಾಭರಣ, ಹಣ ಪಡೆದು ಅಜಯ್'ನನ್ನು ಪಾರು ಮಾಡಿದ್ದಾರೆ. ಬಳಿಕ ತಮಗೇನು ಗೊತ್ತಿಲ್ಲ ರೀತಿ ಹೈಡ್ರಾಮಾ ಮಾಡಿ ವಾಪಸ್ ಬಂದಿದ್ದಾರೆ. ಅನುಮಾನಗೊಂಡ ಜಂಬು ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದಾನೆ. ಮತ್ತೆ ತನಿಖೆ ನಡೆಸಿದಾಗ ಹೆಡ್ ಕಾನ್ಸ್ಟೇಬಲ್ ಕೃತ್ಯ ಬೆಳಕಿದೆ ಬಂದಿದೆ.
ಕೋಲಾರ(ಅ.14): ವಂಚಕನನ್ನು ಸೆರೆ ಹಿಡಿಯಲು ಹೋದ ಮುಖ್ಯಪೇದೆಯೇ ಕಂಬಿ ಹಿಂದೆ ಹೋಗಿದ್ದಾರೆ. ಸುಮಾರು 49 ಜನರಿಗೆ ಒಟ್ಟು 75 ಲಕ್ಷ ಹಣವನ್ನು ವಂಚಿಸಿದ ಕೇಸ್ ಇದು. ಆರೋಪಿ ಎಸ್ಕೇಪ್ ಆಗಿದ್ದ. ಇದನ್ನು ಹಿಡಿಯಲು ಹೊರಟ ಪೊಲೀಸ್ ಪೇದೆ ಅಂದರ್ ಆಗಿದ್ದಾನೆ. ಅದ್ಯಾಕೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.
ವಿದೇಶದಲ್ಲಿ ಕೆಲಸ ಖಾಲಿ ಇದೆ, ಸೂಪರ್ವೈಸರ್ ಕೆಲಸ ಇದೆ. ಪ್ರತೀ ತಿಂಗಳು ಲಕ್ಷ ಲಕ್ಷ ಹಣ ಗಳಿಸಬಹುದು ಎನ್ನುವ ಹಲವು ಟೋಪಿ ಜಾಹೀರಾತು ನೀವು ನೋಡಿರುತ್ತೀರಾ. ಇಂತಹುದೇ ಒಂದು ಸ್ಕೀಂ ಮಾಡಿ ಬೆಂಗಳೂರಿನ ಆನೆಕಲ್'ನ ಆರೋಪಿ ಅಜಯ್ ಕುಮಾರ್ ಎಂಬಾತ 75 ಲಕ್ಷ ವಂಚಿಸಿದ್ದಾನೆ. ಕೆಜಿಎಫ್'ನ ಸುಮಾರು 49 ಜನರಿಂದ ತಲಾ ಒಂದುವರೆ ಲಕ್ಷದಂತೆ ಟ್ರಾವೆಲ್ಸ್ ಮಾಲೀಕನಿಂದ ಪಡೆದು ಪರಾರಿಯಾಗಿದ್ದಾನೆ.
ಅಜಯ್'ಗಾಗಿ 5 ತಿಂಗಳಿಂದ ಹುಡುಕಿದರೂ ಸುಳಿವು ಸಿಕ್ಕಿರಲಿಲ್ಲ. ಬಳಿಕ ಗೋವಾದಲ್ಲಿರುವುದು ದೃಡಪಟ್ಟಿತ್ತು. ಆದರಂತೆ ಪೊಲೀಸರ ಟೀಂ ಜೊತೆ ಜಂಬು ಪೊಲೀಸರು ಜೊತೆ ಹೋಗಿ ಅಜಯ್ ಮನೆಗೆ ದಾಳಿ ಮಾಡಲು ಪ್ಲಾನ್ ಮಾಡಿಕೊಂಡಿದ್ದರು. ಆದರೆ ದಾಳಿಗೂ ಮುನ್ನ ಪೊಲೀಸ್ ತಂಡದಲ್ಲಿದ್ದ ಹೆಡ್ ಕಾನ್ಸ್'ಟೇಬಲ್ ಗೋಪಾಲ್ ಸಿಂಗ್ ತನ್ನ ಗೆಳೆಯರ ಜೊತೆ ಅರೋಪಿ ಮನೆಗೆ ಹೋಗಿ ಅರೋಪಿಯಿಂದ ಚಿನ್ನಾಭರಣ, ಹಣ ಪಡೆದು ಅಜಯ್'ನನ್ನು ಪಾರು ಮಾಡಿದ್ದಾರೆ. ಬಳಿಕ ತಮಗೇನು ಗೊತ್ತಿಲ್ಲ ರೀತಿ ಹೈಡ್ರಾಮಾ ಮಾಡಿ ವಾಪಸ್ ಬಂದಿದ್ದಾರೆ. ಅನುಮಾನಗೊಂಡ ಜಂಬು ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದಾನೆ. ಮತ್ತೆ ತನಿಖೆ ನಡೆಸಿದಾಗ ಹೆಡ್ ಕಾನ್ಸ್ಟೇಬಲ್ ಕೃತ್ಯ ಬೆಳಕಿದೆ ಬಂದಿದೆ.
ಸಾಕ್ಷಿ ನಾಶ ಮಾಡಿದ ಹೆಡ್ ಕಾನ್ಸ್ಟೇಬಲ್ ಗೋಪಾಲ್ ಸಿಂಗ್ ಹಾಗೂ ಆತನ ಗೆಳೆಯ ಸಾದಿಕ್ ರನ್ನು ಕೆಜಿಎಫ್ ರಾರ್ಬಟ್ ಸನ್ ಪೊಲೀಸರು ಬಂಧಿಸಿದ್ದಾರೆ. ವಂಚಕ ಅಜಯ್ ಕುಮಾರ್ ಹಾಗೂ ಆತನ ಕುಟುಂಬ ನಾಪತ್ತೆಯಾಗಿದೆ. ಪೊಲೀಸ್ ತಂಡ ಹುಡುಕಾಟ ಮುಂದುವರೆಸಿದೆ. ಒಟ್ಟಾರೆ ಆರೋಪಿಯಿಂದ ಹಣ ಪಡೆದು ವಂಚನೆಗೆ ನೆರವಾದ ಹೆಡ್ಕಾನ್ಸ್ಟೇಬಲ್ ಗೋಪಾಲ್ ಸಿಂಗ್ ಈಗ ಕಂಬಿ ಹಿಂದೆ ಹೋಗಿದ್ದಾನೆ.
