ತೃಣಮೂಲ ಕಾಂಗ್ರೆಸ್ ಶಾಸಕರೊಬ್ಬರ ದೂರಿನ ಆಧಾರದ ಮೇಲೆ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಮೇಲೆ ಕಲ್ಕತ್ತಾ ಪೊಲೀಸರು ಸ್ಥಳೀಯ ಕೋರ್ಟ್ ನಲ್ಲಿ ಚಾರ್ಜ್ ಶೀಟ್ ದಾಖಲಿಸಿದ್ದಾರೆ.

ಕೋಲ್ಕತ್ತಾ (ಮಾ.10): ತೃಣಮೂಲ ಕಾಂಗ್ರೆಸ್ ಶಾಸಕರೊಬ್ಬರ ದೂರಿನ ಆಧಾರದ ಮೇಲೆ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಮೇಲೆ ಕಲ್ಕತ್ತಾ ಪೊಲೀಸರು ಸ್ಥಳೀಯ ಕೋರ್ಟ್ ನಲ್ಲಿ ಚಾರ್ಜ್ ಶೀಟ್ ದಾಖಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಿವಿ ವಾಹಿನಿಯೊಂದರ ಲೈವ್ ಶೋನಲ್ಲಿ ನನ್ನ ಘನತೆಗೆ ಅವಮಾನವಾಗುವಂತಹ ಪದವನ್ನು ಬಿಜೆಪಿ ಶಾಸಕ ಸುಪ್ರಿಯೋ ಬಳಸಿದ್ದಾರೆ ಎಂದು ಆರೋಪಿಸಿ ಟಿಎಂಸಿ ಎಂಎಲ್ಎ ಮೋಹುವಾ ಮೋಯಿತ್ರಾ ಜ.04 ರಂದು ದೂರು ನೀಡಿದ್ದರು.

ಸುಪ್ರಿಯೋರ ಮೇಲೆ ಅಲಿಪೋರ್ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ದಾಖಲಿಸಿದ್ದೇವೆ. ಅವರಿಗೆ ಮೂರು ಬಾರಿ ಸಮನ್ಸ್ ನೀಡಿದರೂ ಅವರು ಪ್ರತಿಕ್ರಿಯೆ ನೀಡಿರಲಿಲ್ಲವೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.