ನಾಳೆ ಶ್ರೀರಾಮ ಸೇನೆ ಆಯೋಜನೆ ಮಾಡಿರುವ  ಹಿಂದೂ ವಿರಾಟ್  ಸಮಾವೇಶಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.

ಯಾದಗಿರಿ (ಡಿ.11): ನಾಳೆ ಶ್ರೀರಾಮ ಸೇನೆ ಆಯೋಜನೆ ಮಾಡಿರುವ ಹಿಂದೂ ವಿರಾಟ್ ಸಮಾವೇಶಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.

ನಾಳೆ ಯಾದಗಿರಿ ಜಿಲ್ಲೆ ಸುರುಪೂರದಲ್ಲಿ ತಾಲೂಕಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಇರುವ ಕಾರಣದಿಂದ ಹಿಂದೂ ವಿರಾಟ್ ಸಮಾವೇಶಕ್ಕೆ ಭದ್ರತೆ ನೀಡಲು ಸಾಧ್ಯವಾಗುವುದಿಲ್ಲ. ಶ್ರೀರಾಮ ಸೇನೆಯ ಶೋಭಾ ಯಾತ್ರೆ ಹಾಗೂ ಬಹಿರಂಗ ಸಭೆ ನಡೆಸಲು ಮುಂದೊಂದು ದಿನ ಕಾರ್ಯಕ್ರಮ ನಡೆಸಿ ಅಂತ ಎಸ್​ಪಿ ಯಡಾ ಮಾರ್ಟಿನ್ ಆದೇಶವೊಂದನ್ನು ಹೊರಡಿಸಿದ್ದಾರೆ. ಇತ್ತ ಈ ವಿಚಾರ ತಿಳಿದ ಶ್ರೀರಾಮ ಸೇನೆ ಮುಖಂಡರು ಸುದ್ದಿಗೋಷ್ಠಿ ನಡೆಸಿ ನಾವು ಡಿ.12 ರಂದು ಯಾದಗಿರಿ ನಗರದಲ್ಲಿ ಸಮಾವೇಶ ಮಾಡುತ್ತೇವೆ ಅಂತ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಹಿಂದೂ ವಿರಾಟ್ ಸಮಾವೇಶಕ್ಕೆ ಬರದ ಸಿದ್ಧತೆ ಕೂಡ ನಡೆಸಿದ್ದಾರೆ.