ಕೆಲವು ದಿನಗಳ ಹಿಂದಷ್ಟೇ ಮಹದೇವಪುರ ಪೊಲೀಸರು ಗ್ಯಾಂಬ್ಲಿಂಗ್ ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಗ್ಯಾಂಬ್ಲಿಂಗ್ ದಾಳಿ ವೇಳೆ 2 ಲಕ್ಷ 61 ಸಾವಿರ ವಶಪಡಿಸಿಕೊಂಡ ಈ ಇಬ್ಬರು ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಕೇವಲ 42 ಸಾವಿರ ರುಪಾಯಿ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದರು.

ಬೆಂಗಳೂರು(ನ.05): ಹಣಕ್ಕಾಗಿ ಪೊಲೀಸ್​ ಠಾಣೆಯಲ್ಲೇ ಕಿತ್ತಾಡಿದ ಎಸ್'​ಐ ಹಾಗೂ ಪೇದೆ ಸಸ್ಪೆಂಡ್​ ಆಗಿದ್ದಾರೆ. ಬೆಂಗಳೂರಿನ ಮಹದೇವಪುರ ಠಾಣೆಯಲ್ಲಿ ಪೇದೆ ಹಾಗೂ ಎಎಸ್​ಐ ಕಿತ್ತಾಡಿಕೊಂಡಿದ್ರು. ಇವರಿಬ್ಬರ ರಂಪಾಟದ ಬಗ್ಗೆ ಸುವರ್ಣ ನ್ಯೂಸ್​ ವರದಿ ಮಾಡಿತ್ತು. ವರದಿಯಿಂದ ಎಚ್ಚೆತ್ತ ಡಿಸಿಪಿ ಅಬ್ದುಲ್​ ಅಹದ್​, ಎಎಸ್ಐ ಅಮೃತೇಶ್ ಮತ್ತು ಪೇದೆ ಜಯಕಿರಣ್​​ರನ್ನು ಅಮಾನತುಗೊಳಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಮಹದೇವಪುರ ಪೊಲೀಸರು ಗ್ಯಾಂಬ್ಲಿಂಗ್ ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಗ್ಯಾಂಬ್ಲಿಂಗ್ ದಾಳಿ ವೇಳೆ 2 ಲಕ್ಷ 61 ಸಾವಿರ ವಶಪಡಿಸಿಕೊಂಡ ಈ ಇಬ್ಬರು ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಕೇವಲ 42 ಸಾವಿರ ರುಪಾಯಿ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದರು.

ಉಳಿದ ಹಣ ಹಂಚಿಕೊಳ್ಳುವ ವಿಚಾರವಾಗಿ ಮಹದೇವಪುರ ಪೊಲೀಸ್ ಠಾಣೆಯಲ್ಲೇ ಬಡಿದಾಡಿಕೊಂಡಿದ್ದಾರೆ. ದಾಳಿಯ ವೇಳೆ ಬಂಧಿಸಲಾಗಿದ್ದ ಆರೋಪಿಗಳ ಪೈಕಿ ಕೆಲವರನ್ನು ಹೆಡ್ ಕಾನ್ಸಟೇಬಲ್ ಜಯಕಿರಣ್​ ಬಿಟ್ಟು ಕಳುಹಿಸಿದ್ದಾನೆ. ಇದನ್ನು ಪ್ರಶ್ನಿಸಿದ ಇನ್ಸ್'ಪೆಕ್ಟರ್ ಅಮೃತೇಶ್'ಗೆ ಪೇದೆ ಆವಾಜ್​ ಹಾಕಿದ್ದಾರೆ. ಇನ್ಸ್​​ಪೆಕ್ಟರ್​ ಸೂಚನೆ ಮೇರೆಗೆ ಬಿಟ್ಟಿದ್ದೇನೆ ನೀನ್ಯಾವನೋ ಕೇಳೋಕೆ ಎಂದು ಆವಾಜ್​ ಹಾಕಿದ್ದಾನೆ. ಮಾತಿಗೆ ಮಾತು ಬೆಳೆದು ಠಾಣೆ ಸಿಬ್ಬಂದಿ ಮುಂದೆಯೇ ಎಸ್​ಐ ಹಾಗೂ ಪೇದೆ ಬಡಿದಾಡಿಕೊಂಡಿದ್ದಾರೆ.