ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ಕಳ್ಳಕಾಕರನ್ನು ಹಿಡಿದು ಜೈಲಿಗಟ್ಟಬೇಕಿದ್ದ ಪೊಲೀಸ್ ಪೇದೆಯೇ ದರೋಡೆಗೆ ಇಳಿದಿದ್ದಾರೆ. ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿಕೊಂಡು ಸುಲಿಗೆ ಮಾಡುತ್ತಿದ್ದ ಪೇದೆ ಈಗ ಅಂದರ್ ಆಗಿದ್ದಾನೆ.
ಬೆಂಗಳೂರು (ಜ.30): ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ಕಳ್ಳಕಾಕರನ್ನು ಹಿಡಿದು ಜೈಲಿಗಟ್ಟಬೇಕಿದ್ದ ಪೊಲೀಸ್ ಪೇದೆಯೇ ದರೋಡೆಗೆ ಇಳಿದಿದ್ದಾರೆ. ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿಕೊಂಡು ಸುಲಿಗೆ ಮಾಡುತ್ತಿದ್ದ ಪೇದೆ ಈಗ ಅಂದರ್ ಆಗಿದ್ದಾನೆ.
ಜನವರಿ 20 ರಂದು ಎಂ,ಎಸ್ ರಾಮಯ್ಯದಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿರುವ ಅಮಿತ್ ಹಾಗೂ ಸ್ನೇಹಿತರ ಪಿಜಿಗೆ ನುಗ್ಗಿ ರಾಬರಿ ಮಾಡಿದ್ದಾನೆ. ಸ್ಟೇಟ್ ಇಂಟಲಿಜೆನ್ಸ್'ನಲ್ಲಿ ಹೆಡ್'ಕಾನ್ಸ್'ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಬಾಬು, ವಿದ್ಯಾರ್ಥಿಗಳ ಪಿಜಿಗೆ ನುಗ್ಗಿ ಗಾಂಜಾ ಪೊಟ್ಟಣ ಇರಿಸಿದ್ದಾನೆ. 50 ಸಾವಿರ ಕೊಡಬೇಕು, ಇಲ್ಲಾಂದ್ರೆ ಎಫ್'ಐಆರ್ ಹಾಕಿ ಒಳಗಾಗ್ತಿನಿ ಎಂದು ಧಮ್ಕಿಯಾಕಿದ್ದಾನೆ.
ಇದರಿಂದ ಬೆದರಿದ ವಿದ್ಯಾರ್ಥಿ ಅಮಿತ್ ತನ್ನ ಬಳಿಯಿದ್ದ 15 ಸಾವಿರ ಕೊಟ್ಟಿದ್ದಾನೆ. ನಂತರ ಮಲ್ಲೇಶ್ವರಂನಲ್ಲಿರುವ ತನ್ನ ಸ್ನೇಹಿತನ ಬಳಿ ಹಣವಿದೆ ಆತನಿಂದ ನಿಮಗೆ ಕೊಡಿಸುತ್ತೇನೆಂದು ಕರೆದುಕೊಂಡು ಹೋಗಿದ್ದಾನೆ. ಆಟೋದಲ್ಲಿ ಹೋಗುವಾಗ ತನ್ನ ಸ್ನೇಹಿತನಿಗೆ ನಡೆದ ಘಟನೆ ಬಗ್ಗೆ ಮೆಸೇಜ್ ಹಾಕಿದ್ದ. ಇದನ್ನ ಗಮನಿಸಿದ ಪೇದೆ ಬಾಬು ಬಿಎಲ್ ರಸ್ತೆಯ ಅಯ್ಯಪ್ಪಸ್ವಾಮಿ ಟೆಂಪಲ್ ಬಳಿ ಹಲ್ಲೆ ನಡೆಸಿದ್ದಾನೆ. ಅಮಿತ್ ಕೂಗುತ್ತಿದ್ದಂತೆ ನೈಟ್ ಬೀಟಲಿದ್ದ ಪೇದೆಗಳು ಬಂದು ತಪಾಸಣೆ ನಡೆಸಿದಾಗ ವಿಷಯ ಗೊತ್ತಾಗಿದೆ. ಪೇದೆ ಬಾಬು ಸೇರಿದಂತೆ 5 ಮಂದಿಯನ್ನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
