ದೆಹಲಿಯ ಸಂದೇಶ್, ಬೆಂಗಳೂರು ಮೂಲದ ದೀಪಂಕರ್ ಸೇನ್, ಕುನಾಲ್ ಕುಮಾರ್ ಮಂಡಲ್, ಘಾಜಿಯಾಬಾದ್​ನ ಸೌರಭ್ ಕುಮಾರ್ ಬಂಧಿತರಾಗಿದ್ದು, ಬಂಧಿತರಿಂದ 1000ಕ್ಕೂ ಹೆಚ್ಚು ನಕಲಿ ಮಾರ್ಕ್ಸ್ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು 50ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳ ನಕಲಿ ಅಂಕಪಟ್ಟಿಗಳನ್ನು ರೆಡಿ ಮಾಡಿ, ಒಂದು ಮಾರ್ಕ್​ ಕಾರ್ಡ್ 10 ಸಾವಿರ ರೂಪಾಯಿಗೆ ಮಾರುತ್ತಿದ್ದರು ಎನ್ನಲಾಗಿದೆ.

ಬೆಂಗಳೂರು (ಮೇ.05): ಬೆಂಗಳೂರು ಸಿಸಿಬಿ ಹಾಗೂ ಹಲಸೂರು ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ನಕಲಿ ಅಂಕಪಟ್ಟಿಗಳನ್ನು ಮಾರುತ್ತಿದ್ದ ಐವರನ್ನು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೆಹಲಿಯ ಸಂದೇಶ್, ಬೆಂಗಳೂರು ಮೂಲದ ದೀಪಂಕರ್ ಸೇನ್, ಕುನಾಲ್ ಕುಮಾರ್ ಮಂಡಲ್, ಘಾಜಿಯಾಬಾದ್​ನ ಸೌರಭ್ ಕುಮಾರ್ ಬಂಧಿತರಾಗಿದ್ದು, ಬಂಧಿತರಿಂದ 1000ಕ್ಕೂ ಹೆಚ್ಚು ನಕಲಿ ಮಾರ್ಕ್ಸ್ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಸುಮಾರು 50ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳ ನಕಲಿ ಅಂಕಪಟ್ಟಿಗಳನ್ನು ರೆಡಿ ಮಾಡಿ, ಒಂದು ಮಾರ್ಕ್​ ಕಾರ್ಡ್ 10 ಸಾವಿರ ರೂಪಾಯಿಗೆ ಮಾರುತ್ತಿದ್ದರು ಎನ್ನಲಾಗಿದೆ.

ಬಂಧಿತರು 3 ವರ್ಷಗಳಲ್ಲಿ 1 ಲಕ್ಷ 60 ಸಾವಿರ ನಕಲಿ ಅಂಕಪಟ್ಟಿಗಳ ಮಾರಾಟ ಮಾಡಿದ್ದು, ಎಂವಿಎ, ಎಂಟೆಕ್ ಪದವಿಗಾಗಿ 1 ಲಕ್ಷ ಚಾರ್ಜ್ ಮಾಡುತ್ತಿದ್ದರು. ಅಲ್ಲದೇ ಬೇರೆ ಪದವಿಗಳಿಗೆ 50 ಲಕ್ಷ ಚಾರ್ಜ್ ಮಾಡುತ್ತಿದ್ದರು. ಇನ್ನು 50 ಏಜೆಂಟ್’​ಗಳು ದೇಶಾದ್ಯಾಂತ ಇದ್ದಾರೆ ಎನ್ನಲಾಗ್ತಿದೆ.

(ಸಾಂದರ್ಭಿಕ ಚಿತ್ರ)