ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್‌, ವಾಟ್ಸ್‌ ಆ್ಯಪ್‌, ಟ್ವೀಟರ್‌ಗಳಲ್ಲಿ ಪ್ರಕಟವಾ ಗುವ ಆಕ್ಷೇಪಾರ್ಹ ಬರಹಗಳ ಮೇಲೆ ನಿಗಾ ಇರಿಸಲು ಕಲಬುರಗಿ ಪೊಲೀಸರು ರಾಜ್ಯದಲ್ಲೇ ಮೊದಲ ಬಾರಿಗೆ ‘ಸೋಷಿಯಲ್‌ ಮೀಡಿಯಾ ಮಾನಿಟರಿಂಗ್‌ ಆ್ಯಂಡ್‌ ಟೆಕ್ನಿಕಲ್‌ ಸೆಲ್‌' ಸ್ಥಾಪಿಸುವ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ.
ಕಲಬುರಗಿ(ಫೆ.25): ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸ್ ಆ್ಯಪ್, ಟ್ವೀಟರ್ಗಳಲ್ಲಿ ಪ್ರಕಟವಾ ಗುವ ಆಕ್ಷೇಪಾರ್ಹ ಬರಹಗಳ ಮೇಲೆ ನಿಗಾ ಇರಿಸಲು ಕಲಬುರಗಿ ಪೊಲೀಸರು ರಾಜ್ಯದಲ್ಲೇ ಮೊದಲ ಬಾರಿಗೆ ‘ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಆ್ಯಂಡ್ ಟೆಕ್ನಿಕಲ್ ಸೆಲ್' ಸ್ಥಾಪಿಸುವ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ.
ಸದ್ಯದ ವ್ಯವಸ್ಥೆಯಲ್ಲೇ ಈ ಸೆಲ್ ಕೆಲಸ ಮಾಡ ಲಿದ್ದು, ಪೊಲೀಸರೇ ಹಲವು ಸಂಘಟನೆ, ವ್ಯಕ್ತಿಗಳು, ಗಣ್ಯರ ಸಾಮಾಜಿಕ ಜಾಲತಾಣದ ಅಕೌಂಟ್ಗಳ ಮೇಲೆ ಹದ್ದಿನ ಕಣ್ಣಿಡುತ್ತಿದ್ದಾರೆ. ಹೀಗಾಗಿ, ಆ ಖಾತೆಗಳ ನಿತ್ಯದ ಚಟುವಟಿಕೆ, ಅಲ್ಲಿಂದ ಅಪ್ಲೋಡ್ ಆಗುವ ಫೋಟೋ, ಮತ್ತಿತರ ಪೋಸ್ಟ್ಗಳ ಮಾಹಿತಿ ಪೊಲೀಸರಿಗೆ ಲಭ್ಯವಾಗಲಿದೆ.
ಜನರ ಸಂಕಷ್ಟಗಳಿಗೂ ಸ್ಪಂದನೆ:
ಕಲಬುರಗಿ ಪೊಲೀಸರ ಚಿಂತನೆ ಫಲವಾಗಿ ಹೊರಹೊಮ್ಮಿರುವ ‘ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಆ್ಯಂಡ್ ಟೆಕ್ನಿಕಲ್ ಸೆಲ್' ರಾಜ್ಯದ ಗಮನ ಸೆಳೆದಿದೆ. ಈ ಸೆಲ್ನಿಂದ ಕೇವಲ ಜಾಲತಾಣಗಳ ಜಾತಕ ಜಾಲಾಡುವುದಷ್ಟೇ ಅಲ್ಲ. ತಾವೇ ಜನರೊಂದಿಗೆ ಸಂಪರ್ಕದಲ್ಲಿರಲು ವಾಟ್ಸ್ಆ್ಯಪ್, ಫೇಸ್ಬುಕ್, ಟ್ವೀಟರ್ ಅಕೌಂಟ್ ರಚಿಸಿಕೊಂಡು ಇವುಗಳ ಮೂಲಕ ಸಂಕಷ್ಟದಲ್ಲಿರುವ, ನೆರವು ಬಯಸಿ ಬರುವ ಜನರಿಗೆ ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ. ಇದಕ್ಕಾಗಿ ವಾಟ್ಸ್ ಆ್ಯಪ್- 9480803610, ಫೇಸ್ಬುಕ್- kalaburagi district police, ಟ್ಟಿಟರ್- klbdistpolice ಖಾತೆಗಳನ್ನು ತೆರೆದಿದ್ದು ಈ ಮೂಲಕ ಜನ ಪೊಲೀಸರ ಸಹಾಯ ಪಡೆಯಬಹುದು.
ಇಲ್ಲಿನ ಪೊಲೀಸ್ ಭವನದಲ್ಲೇ ಈ ಸೆಲ್ ಕೆಲಸ ಮಾಡುತ್ತಿದ್ದು ಫೇಸ್ಬುಕ್, ಟ್ವೀಟರ್, ವಾಟ್ಸ್ ಆ್ಯಪ್ ಮಾನಿಟರಿಂಗ್, ಸಿಡಿಆರ್ ಅನಾಲಿಸಿಸ್ ವಿಂಗ್, ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಮಾನಿಟರಿಂಗ್, ವೆಬ್ಸೈಟ್ ವಾಚಿಂಗ್ ಯುನಿಟ್ ಮತ್ತು ಸೈಬರ್ ಅಫೆನ್ಸಸ್ ಡಾಕ್ಯುಮೆಂಟೇಶನ್ ಯುನಿಟ್ ಅವನ್ನು ಈ ಸೆಲ್ ಹೊಂದಿದೆ.
ಈ ವಿಭಾಗಕ್ಕೆ ಹೈಸ್ಪೀಡ್ ಅಂತರ್ಜಾಲ ಸೌಲಭ್ಯವಿರುವ ಪ್ರತ್ಯೇಕ 2 ಗಣಕ ಯಂತ್ರಗಳನ್ನು ನೀಡಲಾಗಿದ್ದು, ಒಬ್ಬ ಡಿವೈಎಸ್ಪಿ, ನೋಡಲ್ ಅಧಿಕಾರಿ, ಪಿಐ, ಸಹಾಯಕ ನೋಡಲ್ ಅಧಿಕಾರಿ, ಪಿಎಸ್ಐ ಹಾಗೂ ಒಬ್ಬ ಎಎಸ್ಐ, 5 ಮಂದಿ ಕಾನ್ಸ್ಟೇಬಲ್ಗಳು ಈ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ.
ವರದಿ: ಶೇಷಮೂರ್ತಿ ಅವಧಾನಿ, ಕನ್ನಡ ಪ್ರಭ
