ಗ್ರಾಹಕರೇ ಎಚ್ಚರ ! ಮಾವಿನ ಸುಗ್ಗಿ ಆರಂಭವಾಗುತ್ತಿದಂತೆ ಮಾರುಕಟ್ಟೆ, ರಸ್ತೆ ಬದಿಯಲ್ಲಿ ಬಣ್ಣ ಬಣ್ಣದ ಮಾವುಗಳು ಕಣ್ಣಿಗೆ ಬಿದ್ದರೆ, ಸ್ವಲ್ಪ ಹುಷಾರು. ಯಾಕೆಂದರೆದ್ರೆ ಮಾವು ತಿಂದರೆ ಸಾಕು, ನಿಮಗೆ ಗೊತ್ತಿಲ್ಲದೆ ವಿಷಕಾರಿ ಅಂಶ ನಿಮ್ಮ ದೇಹದೊಳಗೆ ಸೇರುತ್ತದೆ.
ಕೋಲಾರ(ಎ.20): ಗ್ರಾಹಕರೇ ಎಚ್ಚರ ! ಮಾವಿನ ಸುಗ್ಗಿ ಆರಂಭವಾಗುತ್ತಿದಂತೆ ಮಾರುಕಟ್ಟೆ, ರಸ್ತೆ ಬದಿಯಲ್ಲಿ ಬಣ್ಣ ಬಣ್ಣದ ಮಾವುಗಳು ಕಣ್ಣಿಗೆ ಬಿದ್ದರೆ, ಸ್ವಲ್ಪ ಹುಷಾರು. ಯಾಕೆಂದರೆದ್ರೆ ಮಾವು ತಿಂದರೆ ಸಾಕು, ನಿಮಗೆ ಗೊತ್ತಿಲ್ಲದೆ ವಿಷಕಾರಿ ಅಂಶ ನಿಮ್ಮ ದೇಹದೊಳಗೆ ಸೇರುತ್ತದೆ.
ಮಾವಿನ ನಗರಿ ಎಂದೇ ಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಈ ಭಾರಿ ಮಾವು ಭರ್ಜರಿ ಇಳುವರಿ ಬಂದಿದೆ. ಆದ್ರೆ, ಮಾವನ್ನು ಕೃತವಾಗಿ ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಆರ್ಸೆನಿಕ್ ಮತ್ತು ಫಾಸ್ಟರಸ್ ಹೈಡ್ರೇಡ್ ರಾಸಾಯನಿಕ ಬಳಸಿ ಮಾಗಿಸುತ್ತಾರೆ. ಇಂಥಹ ಮಾವಿನಲ್ಲಿ ವಿಷಕಾರಕ ಅಂಶ ಸೇರಿ ಕ್ಯಾನ್ಸರ್ ಗೆ ದಾರಿ ಮಾಡುವ ಅಪಾಯವಿದೆ. ಕೋಲಾರದ ಹಲವೆಡೆ ಕಣ್ಣು ತಪ್ಪಿಸಿ ಕೃತಕವಾಗಿ ಮಾಗಿಸಿದ ಮಾವಿನ ಹಣ್ಣಿನ ಮಾರಾಟ ನಡೆಯುತ್ತಿದ್ದರೂ ಅಧಿಕಾರಿಗಳಿ ಕಣ್ಣು ಮುಚ್ಚಿ ಕೊಂಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.
ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ 2006 ಹಾಗೂ ಆಹಾರ ಭದ್ರತೆ ಮತ್ತು ಗುಣಮಟ್ಟ ನಿಯಂತ್ರಣ ಕಾಯ್ದೆ 2011ರ ಪ್ರಕಾರ ಕ್ಯಾಲ್ಸಿಯಂ ಕಾರ್ಬೈಡ್ ಅನಿಲವನ್ನು ಹಣ್ಣು ಮಾಗಿಸಲು ಬಳಸುವಂತಿಲ್ಲ. ನೈರ್ಸಗಿಕಲ್ಲದ ಆಹಾರ ಮಾರಾಟ ಮಾಡಿದರೆ 5 ಲಕ್ಷ ರೂ ದಂಡ ಹಾಗೂ 5 ವರ್ಷ ಜೈಲು ಕಳುಹಿಸುವ ಕಾನೂನು ಇದೆ.
